ಡಿವಿಜಿ ಸುದ್ದಿ,ಭದ್ರಾವತಿ: ದಾವಣಗೆರೆ ಜಿಲ್ಲೆಯ ರೈತರ ಜೀವ ಜಲ ಭದ್ರಾ ಡ್ಯಾಂ 180 ಅಡಿ ತಲುಪಿದ್ದು, ಭರ್ತಿಗೆ 6 ಅಡಿ ನೀರು ಮಾತ್ರ ಸಂಗ್ರಹವಾಗಬೇಕಿದೆ.
ಮಲೆನಾಡು ಶಿವಮೊಗ್ಗ ಸುತ್ತಮುತ್ತ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಡ್ಯಾಂ ಒಳಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಇಂದಿನ ನೀರಿನ ಮಟ್ಟ180.4 (ಗರಿಷ್ಠ ಮಟ್ಟ : 186) ಅಡಿ ತಲುಪಿದೆ. 15,326 ಕ್ಯೂಸೆಕ್ ಒಳಹರಿವಿದೆ. 2710 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಟ್ಟು 70.488 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಈ ವೇಳೆಗೆ ಡ್ಯಾಂ ಭರ್ತಿಯಾಗಿ ನೀರನ್ನು ಹೊರ ಬಿಡಲಾಗಿತ್ತು.
ಇಂದಿನ ನೀರಿನ ಮಟ್ಟ: 180’4″
ಪೂರ್ಣ ಮಟ್ಟ:186′ ಅಡಿ
ಇಂದಿನ ಸಾಮರ್ಥ್ಯ: 64.578 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು:15326 ಕ್ಯೂಸೆಕ್ಸ್
ಒಟ್ಟು ಹೊರಹರಿವು:2710 ಕ್ಯೂಸೆಕ್ಸ್
ಬಲದಂಡೆ ನಾಲೆ: 2500 ಕ್ಯೂಸೆಕ್ಸ್
ಎಡದಂಡೆ ನಾಲೆ: 50 ಕ್ಯೂಸೆಕ್ಸ್
ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
ಆವಿಯಾಗುವಿಕೆ: 110 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ:185’2″ಅಡಿ
ಸಾಮರ್ಥ್ಯ: 70.488 ಟಿಎಂಸಿ



