ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನ ಜಿಲ್ಲೆಗಳ ರೈತರ ಜೀವನಾಡಿ ಭದ್ರಾ ಡ್ಯಾಂ ಭರ್ತಿಗೆ ಇನ್ನು ಎರಡು ಅಡಿ ನೀರು ಮಾತ್ರ ಅಗತ್ಯವಿದೆ.
ಇಂದು ಬೆಳಗ್ಗೆ 8 ಗಂಟೆ ಹೊತ್ತಿಗೆ ಡ್ಯಾಂನಲ್ಲಿ 183.8 ಅಡಿಯಷ್ಟು ನೀರು ಸಂಗ್ರಹವಾಗಿದೆ. ಭದ್ರಾಡ್ಯಾಂ ಗರಿಷ್ಠ ನೀರಿನ ಮಟ್ಟ 186 ಅಡಿಯಾಗಿದೆ. ಶಿವಮೊಗ್ಗ ಸುತ್ತಮುತ್ತ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಡ್ಯಾಂ ಗೆ ಬರುವ ನೀರಿನ ಒಳ ಹರಿವು ಕಡಿಮೆಯಾಗಿದೆ. ಇಂದು 4,951 ಕ್ಯೂಸೆಕ್ಸ್ ನಷ್ಟು ನೀರು ಒಳ ಹರಿವು ಹೊಂದಿದೆ.
- ಇಂದಿನ ನೀರಿನ ಮಟ್ಟ: 183’8 1/2
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 68.676 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು:4951 ಕ್ಯೂಸೆಕ್ಸ್
- ಒಟ್ಟು ಹೊರಹರಿವು:3169 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:185’71/2″ಅಡಿ
- ಸಾಮರ್ಥ್ಯ: 71.090 ಟಿ ಎಂ ಸಿ



