ಡಿವಿಜಿ ಸುದ್ದಿ, ಚಿಕ್ಕಮಗಳೂರು: ಭದ್ರಾ ಕಾಲುವೆ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಭದ್ರಾ ಡ್ಯಾಂ ಕಾಲುವೆಗೆ ಬಿದ್ದಿದೆ.ಪತಿ ಅಪಾಯದಿಂದ ಪಾರಾಗಿದ್ದು, ಪತ್ನಿ ನೀರು ಪಾಲಾಗಿರುವ ಘಟನೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ನಡೆದಿದೆ.
ಲಕ್ಕವಳ್ಳಿಯ ಸೋಂಪುರ ನಿವಾಸಿಗಳಾದ ಸಂತೋಷ್ ಜೈನ್ (32) ಹಾಗೂ ಅವರ ಪತ್ನಿ ಸರ್ವಮಂಗಳ (29) ಅವರು ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವಾಗ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ಬೊಲೆರೋ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ ಎಂದು ಚಾಲಕ ಸಂತೋಷ್ ಹೇಳಿದ್ದಾರೆ.
ಕಾರು ನೀರಿಗೆ ಬೀಳುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಸಂತೋಷ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಪತ್ನಿ ಸರ್ವಮಂಗಳ ನೀರುಪಾಲು ಆಗಿದ್ದು, ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ. ಈ ಬಗ್ಗೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.