ಡಿವಿಜಿ ಸುದ್ದಿ, ಭದ್ರಾವತಿ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಡ್ಯಾಂ ತುಂಬಲು 8 ಅಡಿ ಮಾತ್ರ ಬಾಕಿ ಇದ್ದು, ಇಂದಿನ ನೀರಿನ ಮಟ್ಟ 178.6 ಅಡಿಗೆ ಏರಿಕೆಯಾಗಿದೆ.
ಶಿವಮೊಗ್ಗ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, 11692 ಕ್ಯೂಸೆಕ್ಸ್ ನಷ್ಟು ಒಳ ಹರಿವು ಹೊಂದಿದೆ. ಒಟ್ಟು ಹೊರಹರಿವು 2676 ಕ್ಯೂಸೆಕ್ಸ್ ಇದ್ದು, ಬಲದಂಡೆಯಿಂದ 2425 ಕ್ಯೂಸೆಕ್ಸ್ ಹಾಗೂ ಎಡ ದಂಡೆಯಿಂದ 93 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ.
ಭದ್ರಾ ಡ್ಯಾಂ ಬಹುತೇಕ ತುಂಬುವ ಹಂತಕ್ಕೆ ಬಂದಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಈ ಬಾರಿಯ ಮುಂಗಾರು ಜೂನ್ ಮೊದಲ ವಾರದಲ್ಲಿ ಪ್ರವೇಶ ಪಡೆದಿದ್ದರೂ, ಜುಲೈ 15 ಆದರೂ ದೊಡ್ಡ ಪ್ರಮಾಣದಲ್ಲಿ ಮಳೆ ಆಗದಿದ್ದರಿಂದ ರೈತರು ಬೆಳೆಗಳಿಗೆ ನೀರು ಪೂರೈಸುವುದು ಅನುಮಾನ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಜುಲೈ 15 ನಂತರ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಳೆದ ವರ್ಷದಂತೆ ಈ ಭಾರೀ ಡ್ಯಾಂ ಭರ್ತಿಯಾಗುವ ಹಂತಕ್ಕೆ ಬಂದಿದೆ.
ಇಂದಿನ ನೀರಿನ ಮಟ್ಟ: 178′ 6″
ಪೂರ್ಣ ಮಟ್ಟ:186′ ಅಡಿ
ಇಂದಿನ ಸಾಮರ್ಥ್ಯ: 62.409 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು:11692 ಕ್ಯೂಸೆಕ್ಸ್
ಒಟ್ಟು ಹೊರಹರಿವು:2676 ಕ್ಯೂಸೆಕ್ಸ್
ಬಲದಂಡೆ ನಾಲೆ: 2425 ಕ್ಯೂಸೆಕ್ಸ್
ಎಡದಂಡೆ ನಾಲೆ: 93 ಕ್ಯೂಸೆಕ್ಸ್
ಕ್ರೆಸ್ಟ್ ಗೇಟ್ ಮುಖಾಂತರ: 0.00 ಕ್ಯೂಸೆಕ್ಸ್
ರಿವರ್ ಬೆಡ್ ಯುನಿಟ್: 0.00 ಕ್ಯೂಸೆಕ್ಸ್
ಸ್ಲೂಯಿಸ್ ಗೇಟ್ ಮುಖಾಂತರ ನದಿಗೆ: 50 ಕ್ಯೂಸೆಕ್ಸ್
ಆವಿಯಾಗುವಿಕೆ: 108 ಕ್ಯೂಸೆಕ್ಸ್
ಕಳೆದ ವರ್ಷದ ಮಟ್ಟ:184’6″ಅಡಿ
ಸಾಮರ್ಥ್ಯ: 69.657 ಟಿಎಂಸಿ



