ಡಿವಿಜಿ ಸುದ್ದಿ, ಬೆಂಗಳೂರು: ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಪೊಲೀಸರ ಗುಂಡೇಟಿಗೆ ಮೂವರು ಬಲಿಯಾಗಿದ್ದು, ಮೃತರ ಗುರುತು ಪತ್ತೆ ಹಚ್ಚಲಾಗಿದೆ.
ವಾಜಿದ್ ಖಾನ್ (20), ಯಾಸಿಂ ಪಾಷಾ (20) ಮತ್ತು ಇನ್ನೊಬ್ಬ 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ನಡೆದ ಪೊಲೀಸ್ ಫೈರಿಂಗ್‍ಗೆ ಇಬ್ಬರು ಮೃತಪಟ್ಟಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಮೃತಪಟ್ಟಿದ್ದಾನೆ.

ಗುಂಡಿಗೆ ಬಲಿಯಾದ ಮೂವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ ಟೆಸ್ಟ್ ಮಾಡಲು ಮೂವರ ಸ್ವಾಬ್ ತೆಗೆದುಕೊಳ್ಳಲಾಗಿದೆ. ಕೋವಿಡ್ ಟೆಸ್ಟ್ ಏನು ಬರುತ್ತೆ ಅಂತ ನೋಡಿಕೊಂಡು ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬೋರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲರ್ಟ್ ಆಗಿದ್ದು, ಮಂಗಳವಾರ ರಾತ್ರಿಯೇ ಆಸ್ಪತ್ರೆಯ ಸುತ್ತಮುತ್ತ ಭದ್ರತೆ ನಿಯೋಜನೆ ಮಾಡಿದೆ.

ವಾಜಿದ್ ಕುಟುಂಬಸ್ಥರು ಬೋರಿಂಗ್ ಆಸ್ಪತ್ರೆ ಶವಾಗಾರದ ಬಳಿ ಕಣ್ಣೀರು ಹಾಕುತ್ತಿದ್ದಾರೆ. ವಾಜಿದ್ ಖಾನ್ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ. ಇಲ್ಲಿ ಗಲಾಟೆ ಶುರುವಾಗಿದ್ದು ನೋಡಿ ಅವರ ಮಾಲೀಕರಿಗೆ ಬೇಗ ಮನೆಗೆ ಕರೆದುಕೊಂಡು ಬಿಡುವಂತೆ ಹೇಳಿದ್ವಿ. ಅವರು ಕರೆದುಕೊಂಡು ಬಂದರು. ನಡೆದುಕೊಂಡು ಬರುವಾಗ ಫೈರಿಂಗ್ ಆಗಿದೆ.
ನಮಗೂ ಈ ಘಟನೆಗೂ ಯಾವ ಸಂಬಂಧ ಇಲ್ಲ. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಯಾದರು ಕುಟುಂಬಸ್ಥರು ಕಣ್ಣಿರು ಹಾಕಿದ್ದಾರೆ.



