ಡಿವಿಜಿ ಸುದ್ದಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಿಸಿಬಿ ಪೊಲೀಸರು ಬರೋಬ್ಬರಿ 1 ಕೋಟಿ ಬೆಲೆಬಾಳುವ 2 ಕ್ವಿಂಟಲ್ ಗಾಂಜಾ ವಶಪಡಿಸಿಕೊಂಡಿದ್ದಾರೆ.
204 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಪಟಡಿಸಿಕೊಂಡಿದ್ದು, ಪೊಲೀಸ್ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗಾಂಜಾ ಬರೋಬ್ಬರಿ ಒಂದು ಕೋಟಿ ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.
Central Crime Branch of Bengaluru Police has arrested 3 inter-state drug pedlers and recovered 204 Kg Ganja. This huge quantity was being distributed in Banglore city and its outskirts. We will look into their network: Kamal Pant, Bengaluru Commissioner of Police #Karnataka pic.twitter.com/sf5oqhNtg5
— ANI (@ANI) August 27, 2020
ಈ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಸಮೀರ್, ಕೈಸರ್ ಪಾಷಾ, ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, ಮೂರು ಮೊಬೈಲ್ ಸೇರಿದಂತೆ 204 ಕೆಜಿ ಗಾಂಜಾ ವಶ ಪಡೆಯಲಾಗಿದೆ.ಈ ಗ್ಯಾಂಗ್ ರಾಜಾರೋಷವಾಗಿ ಲಾರಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ಬೊಳೆತ್ತಿನ್, ವಿರುಪಾಕ್ಷ ನೇತೃತ್ವದ ತಂಡ ದಾಳಿ ಮಾಡಿ ಅರೆಸ್ಟ್ ಮಾಡಿದೆ.
ಗಾಂಜಾ ಸಾಗಾಟದಲ್ಲಿ ರಾಜಕಾರಣಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಬಂಧಿಸಿರುವ ಮೂವರಲ್ಲಿ ಕೈಸರ್ ಪಾಷಾ ಮೈಸೂರಿನ ಜೆಡಿಎಸ್ ಪಕ್ಷದ ಮುಖಂಡನಾಗಿದ್ದಾನೆ. ಈತನೇ ಈ ಗಾಂಜಾ ಗ್ಯಾಂಗಿನ ಕಿಂಗ್‍ಪಿನ್ ಎನ್ನಲಾಗಿದ್ದು, ಈತ ಮೈಸೂರಿನ ಶಾಂತಿನಗರ ನಗರಸಭೆ ಚುನಾವಣೆ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದನು. ಈತ ಲಾರಿಯಲ್ಲಿ ಗಾಂಜಾವನ್ನು ವಿಶಾಖಪಟ್ಟಣದಿಂದ ದೇವನಹಳ್ಳಿಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ.




