ಡಿವಿಜಿ ಸುದ್ದಿ, ಬಳ್ಳಾರಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಏ. 28 ರಂದು ನಡೆಯಬೇಕಿದ್ದ ಕೊಟ್ಟೂರು ತಾಲ್ಲೂಕಿನ ಐತಿಹಾಸಿಕ ಉಜ್ಜಯಿನಿಯ ಶ್ರೀ ಮರುಳ ಸಿದ್ದೇಶ್ವರ ರಥೋತ್ಸವ, ತೈಲಾಭಿಷೇಕವನ್ನು ರದ್ದುಗೊಳಿಸಲಾಗಿದೆ.
ವೈಶಾಖ ಶುದ್ಧ ಪಂಚಮಿ ಏ.28 ರಂದು ಮಂಗಳವಾರ ಸಂಜೆ 5 ನಡೆಯಬೇಕಿದ್ದ ಜಾತ್ರೆಯನ್ನು ಲಾಕ್ ಡೌನ್ ಹಿನ್ನೆಲೆ ರದ್ದುಗೊಳಿಸಲಾಗಿದೆ. ಉಜ್ಜಯಿನಿಯ ಶ್ರೀ ಜಗದ್ಗುರು ಮರುಳ ಸಿದ್ದೇಶ್ವರ ಪುಣ್ಯ ಕ್ಷೇತ್ರವು ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ್ದು, ರಾಜ್ಯದ ನಾನಾ ಪ್ರದೇಶದಲ್ಲಿ ಲಕ್ಷಾಂತರ ಭಕ್ತಾಧಿರನ್ನು ಹೊಂದಿದೆ.
ಲಾಕ್ ಡೌನ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಜಾತ್ರೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲ ಭಕ್ತರು ತಮ್ಮ ಮನೆಯಲ್ಲಿ ಶ್ರೀ ಮರುಳಸಿದ್ದೇಶ್ವರರ ಆರಾಧನೆ ಮಾಡುವಂತೆ ಉಜ್ಜಯಿನಿ ಪೀಠದ ಶ್ರೀ ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.



