ಡಿವಿಜಿ ಸುದ್ದಿ, ದಾವಣಗೆರೆ: ಶ್ರೀ ಸ್ವಾಮಿ ಅಯ್ಯಪ್ಪ ಶಬರಿಮಲೈ ಸೇವಾ ಸಮಿತಿ ವತಿಯಿಂದ ಲೇಬರ್ ಕಾಲೋನಿಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಡಿಸೆಂಬರ್ 14 ರಂದು ನಡೆಯಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್, ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವನ್ನು ಡಿ. 14 ರಂದು ಆಚರಿಸಲಾಗುವುದು. ಬೆಳಗ್ಗೆ 6 ಗಂಟೆಗೆ ಅಷ್ಟೋತ್ತರ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ, ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್ ಭಾಗಿಯಾಗಲಿದ್ದಾರೆ.
ಡಿ.15 ರಂದು ಮಧ್ಯಾಹ್ನ 3 ಗಂಟೆಗೆ ದೀಪೋತ್ಸವ ಮೆರವಣಿಗೆ ನಡೆಯಲಿದೆ. ದೀಪೋತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ವಿ ರಾಮಚಂದ್ರ ಭಾಗಿಯಾಗಲಿದ್ದಾರೆ. ಡಿ. 16 ರಂದು ಸೋಮವಾರ ಬೆಳಗ್ಗೆ5 ಗಂಟೆಯಿಂದ 6.30 ವರೆಗೆ ಅಗ್ನಿಕುಂಡದ ಹರಕೆ ಅರ್ಪಿಸುವ ಕಾರ್ಯಕ್ರಮ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಕೋರಿದರು.



