ಶನಿ ಗ್ರಹದಿಂದ ಜೀವನದಲ್ಲಿ ಆಗುವ ಪರಿಣಾಮಗಳೇನು ..?

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ನಿಮ್ಮ ಜನ್ಮ ಕುಂಡಲಿಯಲ್ಲಿ ಲಗ್ನದಿಂದ ಎಷ್ಟನೇ ಮನೆಯ ಶನಿ ಏನು ಫಲ ನೀಡುತ್ತಾನೆ?
ನಿಮ್ಮ ಜಾತಕದಲ್ಲಿ ಶನಿ ಗ್ರಹ ಎಲ್ಲಿದೆ ಎಂಬ ಆಧಾರದಲ್ಲಿ ನಿಮ್ಮ ಜೀವನದ ಮೇಲೆ ಆಗಿರುವ- ಆಗುತ್ತಿರುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬಹುದು.

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ಲಗ್ನದಲ್ಲಿ ಒಂದನೇ ಸ್ಥಾನ ಶನಿ ಗ್ರಹ ಇದ್ದರೆ, ಇದು ತನು ಸ್ಥಾನ.
ಲಗ್ನದಲ್ಲೇ ಶನಿ ಇರುವವರ ಉದ್ಯೋಗ ಜೀವನ ,ಸಂಸಾರದ ಜೀವನ ಬಹಳ ಉತ್ತಮವಾಗಿರುತ್ತದೆ. ಏಕೆಂದರೆ ಅ ಸ್ಥಾನದಲ್ಲಿ ಇರುವ ಶನಿ ಹತ್ತನೇ ಮನೆ ಅಂದರೆ ವೃತ್ತಿ ಬದುಕಿನ ಸ್ಥಾನವನ್ನು ವೀಕ್ಷಣೆ ಮಾಡುತ್ತಾನೆ. ಶಿಸ್ತು ಬದ್ಧವಾದ ಜೀವನ. ಶ್ರಮ ಜೀವಿಗಳು ಹಾಗೂ ಮಹತ್ವಾಕಾಂಕ್ಷಿಗಳು ಆಗಿರುತ್ತಾರೆ. ಇನ್ನು ಶನಿಯು ಏಳನೇ ಮನೆಯನ್ನೂ ದೃಷ್ಟಿ ಸುವುದರಿಂದ ಮದುವೆ ಆಗುವವರ ವಯಸ್ಸು ಏರುಪೇರು ಆಗಿರುತ್ತದೆ .ಮೂರನೇ ಮನೆಯ ಮೇಲೂ ದೃಷ್ಟಿ ಪ್ರಭಾವದಿಂದ ಸೋದರ ಸಹೋದರಿಯರ ಜೊತೆ ಸಂಬಂಧ ಉತ್ತಮವಾಗಿರುವುದಿಲ್ಲ.

ಲಗ್ನದಿಂದ ಎರಡನೇ ಮನೆಯಲ್ಲಿ ಶನಿಯಿದ್ದರೆ ಇದು ಧನ ಸ್ಥಾನ.
ಈ ಸ್ಥಾನದಲ್ಲಿ ಶನಿ ಇದ್ದರೆ ಯಶಸ್ಸು ದೊರೆಯುವಂತೆ ಮಾಡುತ್ತಾನೆ. ಕುಟುಂಬದಿಂದ ದೂರ ಉಳಿಯುತ್ತಾನೆ. ತನ್ನ 35 ಪ್ರಾಯದ ಮೇಲೆ
ಸಮೃದ್ಧಿ ಮನುಷ್ಯನಾಗುವನು. ಇವರಿಗೆ ಮಾತಾಪಿತೃ ಸಹಕಾರ ಸಿಗುವುದಿಲ್ಲ.ಶನಿ ದಶೆ ನಡೆಯುವ ಅವಧಿಯಲ್ಲಿ ಇವರಿಗೆ ಹೆಚ್ಚಿನ ಲಾಭ ಆಗುತ್ತದೆ.

ಲಗ್ನದಿಂದ ಮೂರನೇ ಮನೆಯಲ್ಲಿ ಶನಿಯಿದ್ದರೆ ಇದು ಭಾತೃ/ ಸಹೋದರ ಸ್ಥಾನ.
ಸ್ವಾರ್ಥ ಮನೋಭಾವನೆ ಉಳ್ಳವರು. ಒಂದು ವೇಳೆ ಈ ಸ್ಥಾನದಲ್ಲಿ ಶನಿಯ ಜತೆಗೆ ರವಿ ಗ್ರಹ ಇದ್ದರೆ ಮಾತಾಪಿತೃ ಜತೆಗಿನ ಸಂಬಂಧ ಚೆನ್ನಾಗಿರುವುದಿಲ್ಲ. ಜತೆಗೆ ಸೋದರ-ಸೋದರಿ ಜತೆಗೆ ಸಂಬಂಧವೂ ಚೆನ್ನಾಗಿರುವುದಿಲ್ಲ. ಉನ್ನತ ಶಿಕ್ಷಣಕ್ಕೆ ನಾನಾ ಅಡ್ಡಿಗಳು ಬರುತ್ತವೆ. ಧಾರ್ಮಿಕ- ಆಧ್ಯಾತ್ಮಿಕ ಕಾರ್ಯಗೆ ಬಂಗ.

ಲಗ್ನದಿಂದ ನಾಲ್ಕನೇ ಭಾವದ ಶನಿ ಇದು ಮಾತಾ ಸ್ಥಾನ.
ಕುಟುಂಬದ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಾರೆ. ಮಾತಾಪಿತೃ ಜತೆಗೆ ಬಾಂಧವ್ಯ ದೀರ್ಘ ಕಾಲ ಇರುವುದಿಲ್ಲ. ಆರೋಗ್ಯ ಉತ್ತಮವಾಗಿರುತ್ತದೆ. ಶತ್ರುಗಳ ಜೊತೆ ಹೋರಾಟದ ಬದುಕು ಸಂಭವ. ಒಂದು ವೇಳೆ ಈ ಸ್ಥಾನದಲ್ಲಿ ಶನಿ ನೀಚನಾಗಿದ್ದರೆ ಉದರ ದೋಷ ಹಾಗೂ ಸಂದು ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗ ಹಾಗೂ ವೃತ್ತಿ ಬದುಕಿನಲ್ಲಿ ಬೆಳೆಯಲು ಶನಿ ಸ್ವಾಮಿ ಸಹಕಾರಿಯಾಗಲಿದೆ.

ಲಗ್ನದಿಂದ ಐದನೇ ಮನೆಯಲ್ಲಿ ಶನಿ ಪಿತೃ/ ಸುತ ಸ್ಥಾನ.
ಶನಿ ಇದ್ದರೆ ನಿಮ್ಮ ಆಸೆ-ಆಕಾಂಕ್ಷೆಗಳಿಗೆ ತಡೆ. ಜತೆಗೆ ಮದುವೆ, ಸಂತಾನ ವಿಚಾರ ವಿಳಂಬ. ಒಂದು ವೇಳೆ ಶನಿಯು ಬುಧ ಅಥವಾ ಶುಕ್ರನ ಜತೆಗೆ ಇದ್ದರೆ ತುಂಬಾ ಚಟುವಟಿಕೆ ಉಳ್ಳವರು. ಗುಣವಂತಿ, ಹಣವಂತ, ಧರ್ಮವಂತೆ, ಶಿಸ್ತುಬದ್ಧ ಸಂಗಾತಿ ಸಿಗುತ್ತಾರೆ. ಆಕಸ್ಮಿಕ ಲಾಭಗಳನ್ನು ಪಡೆಯುತ್ತಾರೆ.

ಲಗ್ನದಿಂದ ಆರನೇ ಸ್ಥಾನದಲ್ಲಿ ಶನಿ ಇದು ಶತ್ರು ಸ್ಥಾನ.
ಇಲ್ಲಿ ಶನಿ ಗ್ರಹ ಇದ್ದರೆ ಶತ್ರುಗಳು ನಾಶವಾಗುತ್ತಾರೆ. ಇಷ್ಟ ಕೆಲಸ ಪ್ರಾಪ್ತಿ.ದೀರ್ಘಾಯುಷ್ಯ ನೀಡುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಜಾಣರು. ಒಂದು ವೇಳೆ ಶನಿ ನೀಚನಾಗಿದ್ದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ವಿದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಸ್ವತಂತ್ರ ಉದ್ಯಮ ಪ್ರಾರಂಭ ಮಾಲೀಕರಾಗುವ ಅವಕಾಶ ಕಡಿಮೆ. ಕುಟುಂಬದ ನೆರವು ದೊರೆಯುತ್ತದೆ.

ಲಗ್ನದಿಂದ ಏಳರಲ್ಲಿ ಶನಿಯಿದ್ದರೆ
ಕಳತ್ರ /ಮದುವೆ ಸ್ಥಾನ.
ಶಿಸ್ತಿನ ಸಂಗಾತಿ ದೊರೆಯುತ್ತಾರೆ. ಉನ್ನತ ವಿದ್ಯಾಭ್ಯಾಸ ಮಾಡುವಿರಿ. ಏಕಾಂಗಿತನ ಇರ್ಲಿಕ್ಕೆ ಇಷ್ಟಪಡುವವರು. ಮನೆಯಲ್ಲಿ ಕುಟುಂಬದ ಜೊತೆ ಸೇರುವುದಿಲ್ಲ.

ಲಗ್ನದಿಂದ ಎಂಟನೇ ಸ್ಥಾನದಲ್ಲಿ ಶನಿ ಸ್ಥಿತನಾಗಿದ್ದರೆ, ಅದು ಆಯುಷ್ಯ ಸ್ಥಾನ.
ಲಗ್ನಕ್ಕೆ ಎಂಟರಲ್ಲಿ ಶನಿಯಿದ್ದರೆ ದೀರ್ಘಾಯುಷ್ಯವನ್ನು ನೀಡುವ ಜತೆಗೆ ದುರದೃಷ್ಟವನ್ನೂ ತರುತ್ತಾನೆ. ಇವರಿಗೆ ಕಷ್ಟಗಳು- ಸಮಸ್ಯೆಗಳು ತಡವಾಗಿ ಬರುತ್ತವೆ. ಜೀವನದ ಆರಂಭಿಕ ಹಂತದಲ್ಲೇ ಇವರು ಕುಟುಂಬದಿಂದ ದೂರ. ಶಿಕ್ಷಣದಲ್ಲಿ ಅಡೆತಡೆಗಳು ಹಾಗೂ ಸಂತಾನ ವಿಚಾರದಲ್ಲಿ ಸಮಸ್ಯೆಗಳಾಗುತ್ತವೆ.

ಲಗ್ನದಿಂದ ಒಂಬತ್ತರಲ್ಲಿ ಶನಿ
ಅದು ಭಾಗ್ಯಸ್ಥಾನ.
ನ್ಯಾಯ, ನೀತಿ, ಧರ್ಮ, ಪಾಲನೆ. ಮಾತಾಪಿತೃ ಸೌಭಾಗ್ಯ ದೊರೆಯುವುದಿಲ್ಲ .ಶನಿ ದಶೆ ನಡೆಯುವಾಗ ಉತ್ತಮ ಫಲ ದೊರೆಯುತ್ತದೆ. ಸಾಲದಿಂದ ಮುಕ್ತಿ. ಹಾಗೂ ಅನಾರೋಗ್ಯ ಸಮಸ್ಯೆ ನಿವಾರಣೆ ಬೇಗ ಆಗುತ್ತದೆ.

ಲಗ್ನದಿಂದ ಹತ್ತನೇ ಸ್ಥಾನದಲ್ಲಿ ಶನಿ ಕರ್ಮ /ಕೆಲಸ ಸ್ಥಾನ.
ಉದ್ಯೋಗ ಅಥವಾ ವೃತ್ತಿ ಬದುಕು ಬಹಳ ಸುಂದರವಾಗಿರುತ್ತದೆ . ಲೋಹ ಆಗುತ್ತಲ್ಲ ಸಂಬಂಧಿಸಿದ ವ್ಯಾಪಾರ ಉದ್ಯಮ ದಾರರಿಗೆ ಉತ್ತಮ ಲಾಭಾಂಶ. ಸರ್ಕಾರಿ ನೌಕರಿ ಪ್ರಾಪ್ತಿ.
ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ಸು. ಸಂಗಾತಿಯೊಡನೆ ಸಂತೋಷ. ಮದುವೆ ವಿಳಂಬದ ಸಾಧ್ಯತೆ.

ಲಗ್ನದಿಂದ ಹನ್ನೊಂದರಲ್ಲಿ ಶನಿ
ಇದು ಲಾಭ ಸ್ಥಾನ.
ದೊಡ್ಡ ಪ್ರಮಾಣದ ಆಸ್ತಿ, ಸಮಾಜದಲ್ಲಿ ಉತ್ತಮ ಸ್ಥಾನ-ಮಾನ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಜತೆಗೆ ಚಂದ್ರ ಜತೆಗೆ ಇದ್ದು, ಅಲ್ಲೇ ಶನಿಯೂ ಇದ್ದರೆ ಯಶಸ್ಸು, ಅತ್ಯುನ್ನತ ಸ್ಥಾನ ಮಾನ ದೊರೆಯುತ್ತದೆ. ಸಮಾಜದಲ್ಲಿ ಅಪಾರ ಸಂಖ್ಯೆಯ ಸ್ನೇಹಿತರು ಇರುತ್ತಾರೆ. ಕುಜ ಅಥವಾ ಪಾಪ ಗ್ರಹಗಳು ಯಾವುದಾದರೂ ಗ್ರಹ ಲಗ್ನದಲ್ಲಿ ಇದ್ದಲ್ಲಿ ಆರೋಗ್ಯ ಸಮಸ್ಯೆಗಳು ಸಂಭವ.

ಲಗ್ನದಿಂದ ಹನ್ನೆರಡನೇ ಮನೆ ಶನಿಇದು ವ್ಯಯ ಸ್ಥಾನ.
ಆಸ್ತಿ ಕಳೆದುಕೊಳ್ಳುತ್ತಾರೆ. ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನೂ ಉಳಿಸಿಕೊಳ್ಳಲು ಆಗುವುದಿಲ್ಲ. ಒಂದು ಕಡೆಯಿಂದ ಆಸ್ತಿ ಸಂಪಾದನೆಗೆ ಶ್ರಮ ಪಡುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ್. ಶನಿ ಮಹರ್ದಶಾ ನಡೆಯುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *