ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಸಾಮಾನ್ಯವಾಗಿ ವಿವಾಹದ ಮೊದಲು ಜಾತಕ ಪರೀಕ್ಷಿಸಲು ಸಾಮಾನ್ಯ.
(1) ಗುರು ಗ್ರಹದ ಪ್ರಭಾವ
ಗುರುಗ್ರಹವು ಉಚ್ಚವಾಗಿದ್ದರೆ ಶುಭ ದೃಷ್ಟಿ ಫಲ ನೀಡುವನು. ಇಂಥವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ದಾಂಪತ್ಯ ಜೀವನ ಅನೇಕ ಕಷ್ಟಕಾರ್ಪಣ್ಯಗಳು ದೂರ ಮಾಡುವನು. ಅದರ ಜೊತೆಗೆ ಸಂತಾನ ಫಲ ನೀಡುತ್ತಾನೆ.
ಗುರುಗ್ರಹವು ಸಪ್ತಮ ಸ್ಥಾನದಲ್ಲಿ ಇದ್ದರೆ ಕಷ್ಟ ಕೊಡುತ್ತಾನೆ.ಆದರೆ ವಿಚ್ಛೇದನ ಪ್ರಕ್ರಿಯೆ ಮಾಡುವುದಿಲ್ಲ. ಒಂದು ವೇಳೆ ಗುರುಗ್ರಹವು ಪಾಪಗ್ರಹದ ಪ್ರಭಾವದಲ್ಲಿ ಸಿಲುಕಿದರೆ ದಾಂಪತ್ಯ ಜೀವನ ಅನೇಕ ಪ್ರಕಾರದ ಸಮಸ್ಯೆಗಳನ್ನು ಕೊಡುತ್ತಾನೆ.

(2) ಶುಕ್ರ ಗ್ರಹ
ಶುಕ್ರ ಗ್ರಹದ ಪ್ರಭಾವ ನಿಮ್ಮ ಕುಂಡಲಿಯಲ್ಲಿ ಪರೀಕ್ಷಿಸಬೇಕು. ಶುಕ್ರನು ವಿವಾಹ ಕಾರಣಕರ್ತರು ಎಂದು ಕರೆಯುವುದುಂಟು. ನಿಮ್ಮ ವೈವಾಹಿಕ ಜೀವನ ಉತ್ತಮವಾಗಿರಬೇಕು ಎಂದರೆ ಉತ್ತಮ ಸ್ಥಾನದಲ್ಲಿರಬೇಕು
(3) ಮಂಗಳ ಗ್ರಹ
ಮದುವೆ ವಿಚಾರದಲ್ಲಿ ಜಾತಕ ಪರೀಕ್ಷಿಸುವಾಗ ಮಂಗಳ ಗ್ರಹದ ಸ್ಥಿತಿ ನೋಡಬೇಕು. ಯಾವ ಮನೆಯಲ್ಲಿದೆ ಅದರ ಮೇಲೆ ಯಾವ ಗ್ರಹದ ದೃಷ್ಟಿ ನೋಡಬೇಕು. ಮಂಗಳನು ಯಾವುದರ ಜೊತೆ ಸಂಯೋಗ ಇದೆ ನೋಡಬೇಕು. ಜಾತಕ ದಲ್ಲಿ ಏನಾದರೂ ತೊಂದರೆ ಅಂದರೆ ಮಾಂಗಲಿಕ( ಮಂಗಳದೋಷ, ಅಂಗಾರಕ ದೋಷ , ಕುಜದೋಷ )ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಪಡೆಯಬೇಕು. ಇದನ್ನೆಲ್ಲಾ ನೋಡಿ ಮದುವೆಗೆ ಅನುಮತಿ ನೀಡಬೇಕು.



