ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಹೊಳೆ ಸ್ನಾನ, ನದಿ ಸ್ನಾನ ಸಮುದ್ರ ಸ್ನಾನ ಏಕೆ ಮುಖ್ಯ?
ಸನಾತನಧರ್ಮದ ಸಂಸ್ಕೃತಿಯಲ್ಲಿ ಪ್ರತಿದಿನ ಸ್ನಾನ ಮಾಡುವುದು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಬ್ರಾಹ್ಮಿ ಮುಹೂರ್ತ ಅಂದರೆ ಸೂರ್ಯೋದಯ ಸಮಯದಲ್ಲಿ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸುವುದು ಅಭ್ಯಾಸ ಮಾಡಿಕೊಳ್ಳಿ. ಸಾಧು, ಸಂತರು, ಸನ್ಯಾಸಿಗಳು ತಣ್ಣೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಇದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದು. ದೀರ್ಘಾಯಸ್ಸು ಪಡೆಯಬಹುದು. ಪುಣ್ಯ ಸಂಪಾದನೆ ಇದು ಪುಣ್ಯಕಾಲ ಎಂದು ಹೇಳಲಾಗಿದೆ.
ದಿನಕ್ಕೆ ಎಷ್ಟು ಸಾರಿ ಸ್ನಾನ ಮಾಡಬೇಕು?
(1) ಸಾಧು ,ಸಂತರು ಸನ್ಯಾಸಿಗಳು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು ಎಂದು ವೇದ ಶಾಸ್ತ್ರ ಹೇಳುತ್ತದೆ.
(2) ವಿವಾಹಿತ ವ್ಯಕ್ತಿಯು ದಿನಕ್ಕೆ ಎರಡು ಸಲ ಸ್ನಾನ ಮಾಡಬೇಕು.
(3) ಅವಿವಾಹಿತರು ದಿನಕ್ಕೆ ಒಂದು ಬಾರಿ ಸ್ನಾನ ಮಾಡಿರಿ.
ಪ್ರತಿದಿನ ಸ್ನಾನ ಮಾಡುವಾಗ ಬೇವಿನ ಎಲೆ ಹಾಕಿ ಸ್ನಾನ ಮಾಡಿದರೆ ಒಳ್ಳೆಯದು. ಅಷ್ಟೇ ಅಲ್ಲ ವೇದಶಾಸ್ತ್ರ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖವಿದೆ.
ಹೊಳೆ ಸ್ನಾನ, ನದೀಸ್ನಾನ ಮತ್ತು ಸಮುದ್ರ ಸ್ನಾನ ಏಕೆ ಮುಖ್ಯ?
ಹೊಳಿ ಸ್ನಾನ ಮತ್ತು ನದೀಸ್ನಾನ ಮಳೆಗಾಲದಲ್ಲಿ ಮಳೆಯಾಗಿ ಎಲ್ಲಾ ಕಾಡಿನಲ್ಲಿ ನೀರು ಬಿದ್ದು, ಅಲ್ಲಿ ಬಿದ್ದಿರುವ ಎಲೆಗಳ ಜೊತೆ ಸೇರಿ ನೀರು ಹರಿದು ಬಂದು ಹೊಳೆಗೆ ಅಲ್ಲಿಂದ ನದಿಗೆ ಸೇರುತ್ತದೆ.ನಾನಾರೀತಿಯ ತಪ್ಪಲು ಪ್ರದೇಶದಿಂದ ಹರಿದುಬಂದ ನೀರಿನಿಂದ ಸ್ನಾನ ಮಾಡಿದರೆ ಆಯುರ್ವೇದ ವನಸ್ಪತಿ ಔಷಧಿ ಗುಣ ಹೊಂದಿರುತ್ತದೆ. ಇದರಿಂದ ರೋಗಾಣುಗಳಿಂದ ಮುಕ್ತಿ ಹೊಂದುವಿರಿ.
ಸಮುದ್ರದಲ್ಲಿ ತಾವು ಸ್ನಾನ ಮಾಡಿದರೆ ಅದರಲ್ಲಿ ಉಪ್ಪಿನ ಅಂಶ ಹೇರಳವಾಗಿರುತ್ತದೆ. ಅಲ್ಲಿ ತಾವು ಸ್ನಾನಮಾಡಿದರೆ ಚರ್ಮದ ಕಾಯಿಲೆಯಿಂದ ಮುಕ್ತಿ ಹೊಂದುವಿರಿ, ಆದ್ದರಿಂದ ದೇಶ-ವಿದೇಶದಿಂದ ಸಮುದ್ರತೀರದಲ್ಲಿ ವಾಯುವಿಹಾರ ಮಾಡುತ್ತಾರೆ. ಇದಕ್ಕೆ ಪಕ್ಕ ಉದಾಹರಣೆಯಾಗಿದೆ.
ತಾವು ಸ್ನಾನ ಮಾಡುವಾಗ ಈ ಕೆಳಗಿನಂತೆ ಪ್ರಾರ್ಥನೆಗಳನ್ನು ಪಠಣ ಮಾಡಬೇಕು.
(1) ಹನುಮಾನ್ ಚಾಲೀಸ್ ಸ್ನಾನ ಮಾಡುವಾಗ ಪಠಣ ಮಾಡಬೇಕು
(2)ಮನಸ್ಸಿನ ಶಾಂತಿಗಾಗಿ ಋಷಿಮುನಿಗಳು ತಿಳಿಸಿದ ಮಂತ್ರ ಈ ವಿಶೇಷ ಮಂತ್ರವನ್ನು ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ ಎಂದು ಋಷಿಮುನಿಗಳು ಅರುಹಿದ್ದಾರೆ. ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ/ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ//
ಅಪವಿತ್ರನಾದರೂ, ಪವಿತ್ರನಾದರೂ, ಯಾವುದೇ ಅವಸ್ಥೆಯಲ್ಲಿದ್ದರೂ ಭಗವಂತನಾದ ಪುಂಡರೀಕಾಕ್ಷನ ಸ್ಮರಣೆ ಮಾಡಿದಲ್ಲಿ ಹೊರಗಿನಿಂದ ಮತ್ತು ಒಳಗಿನಿಂದ ಶುದ್ಧನಾಗುತ್ತಾನೆ. ತನು-ಮನ ಶುದ್ಧಿಯು ಈ ಮಂತ್ರದಿಂದ ಸಾಧ್ಯವೆಂದು ಹೇಳಲಾಗಿದೆ.
ಅದಕ್ಕಾಗಿ ಹಿರಿಯರು ಹೇಳುತ್ತಾರೆ ,”ಗಂಗಾಸ್ನಾನ ತುಂಗಾ ಪಾನ “ಅಂದರೆ ಗಂಗಾ ನದಿಯ ಸ್ನಾನ ಮಾಡಿ ತುಂಗಾ ನದಿಯ ನೀರನ್ನು ಸೇವಿಸಿರಿ ಎಂದು.
:ಸರ್ವೇ ಜನ ಸುಖಿನೋ ಭವಂತು:
.ಶುಭವಾಗಲಿ.