Connect with us

Dvgsuddi Kannada | online news portal | Kannada news online

ಉದರ ದೋಷ, ಬೆನ್ನು ನೋವು ಇದೆಯಾ? ಧನುರಾಸನ ಅಭ್ಯಾಸ ಮಾಡಿ

ಆರೋಗ್ಯ

ಉದರ ದೋಷ, ಬೆನ್ನು ನೋವು ಇದೆಯಾ? ಧನುರಾಸನ ಅಭ್ಯಾಸ ಮಾಡಿ

-ಜಿ.ಎನ್.ಶಿವಕುಮಾರ
ರಾಮಾಯಣ, ಮಹಾಭಾರತದಲ್ಲಿ ಧನಸ್ಸನ್ನು ಎದೆಗೇರಿಸಿ ವೈರಿಯತ್ತ ಬಾಣ ಹೊಡೆಯುವ ದೃಶ್ಯಗಳು ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿವೆ. ಧನಸ್ಸಿನಹಾಗೆ ನಮ್ಮ ದೇಹವನ್ನು ಎಳೆದು ಹಿಗ್ಗಿಸಿಟ್ಟು ದೇಹಾರೋಗ್ಯ ಕಾಪಾಡಿಕೊಳ್ಳಲು ಯೋಗ(Yoga)ದಲ್ಲಿ ಧನುರಾಸನ(Dhanurasana) ವನ್ನು ವಿವರಿಸಲಾಗಿದೆ.
ಬನ್ನಿ ಮರಕ್ಕೆ ಶಮಿ ವೃಕ್ಷವೆನ್ನುತ್ತಾರೆ. ಪಾಂಡವರು ಬಿಲ್ಲು, ಬಾಣ, ಗದೆ ಸೇರಿದಂತೆ ತಮ್ಮ ಆಯುಧಗಳನ್ನು ಶಮಿ ವೃಕ್ಷದಲ್ಲಿ ಇರಿಸಿದ್ದರಂತೆ. ವಿಜಯ ದಶಮಿಯಂದು ಇದಕ್ಕೆ ವಿಶೇಷ ಪೂಜೆ ಸಲ್ಲಿಸಿ, ನಿಮ್ಮ ‘ಬಾಳು ಬಂಗಾರವಾಗಲಿ’ ಎಂದು ಒಬ್ಬರಿಗೊಬ್ಬರು ಬನ್ನಿಯನ್ನು ಕೊಟ್ಟು ಶುಭ ಕೋರುತ್ತಾರೆ.
ಅರ್ಜುನನ ಬಿಲ್ಲು ವಿದ್ಯೆಗೆ ಯಾರೂ ಸರಿಸಾಟಿಯಿಲ್ಲ. ಏಕಲವ್ಯ ಶಬ್ಧವೇದಿ ವಿದ್ಯೆಯ ಪಾರಂಗತನಾದದ್ದು ಬಿಲ್ಲುಗಾರಿಕೆ ಕಲಿಯಬೇಕೆಂಬ ಅತೀವ ಆಸಕ್ತಿಯಿಂದಲೇ. ಪ್ರಸ್ತುತ ‘ಆರ್ಚರಿ’(Archery) ಹೆಸರಿನಲ್ಲಿ ಬಿಲ್ವಿದ್ಯೆ ಸ್ಪರ್ಧೆಗಳು ನಡೆಯುತ್ತಿವೆ.
ಅಂದಹಾಗೆ ಬಿಲ್ಲಿಗೆ ಧನು, ಧನಸ್ಸು ಎಂಬ ಹೆಸರಿವೆ. ಇದನ್ನು ಹೋಲುವ ‘ಧನುರಾಸನ’ ರೂಢಿಯಲ್ಲಿದೆ.
ಬಿಲ್ಲನ್ನು ಎದೆಗೇರಿಸಿ, ಬಾಣ ಹೂಡಿ ಗುರಿಯತ್ತ ದೃಷ್ಟಿ ನೆಟ್ಟು, ಗುರಿಗೆ ಹೊಡೆಯಲು ದಾರವನ್ನು ಮೀಟಿದಾಗ ಬಿಲ್ಲು ಭಾಗಿದ ರೀತಿಯಲ್ಲಿ ದೇಹವನ್ನು ಎಳೆದು ನಿಲ್ಲಿಸುವುದೇ ಧನುರಾಸನ.

ಅಭ್ಯಾಸ ಕ್ರಮ

ಕಾಲುಗಳನ್ನು ನೀಳವಾಗಿ ಚಾಚಿ ಬೆನ್ನು ಮೇಲೆ ಮಾಡಿ ಮಲಗಿ. ಕಾಲುಗಳನ್ನು ಮಡಿಚಿ ಕೈಗಳಿಂದ ಕಾಲಿನ ಮಣಿಗಂಟನ್ನು ಬಿಗಿಯಾಗಿ ಹಿಡಿದುಕೊಳ್ಳಿ. ಉಸಿರನ್ನು ತೆಗೆದುಕೊಳ್ಳುತ್ತಾ ಎದೆ, ತೊಡೆಯ ಭಾಗವನ್ನು ನೆಲದಿಂದ ಮೇಲೆತ್ತಿ. ಕೈಗಳು ನೇರವಾಗಿದ್ದು, ಬೆನ್ನನ್ನು ಬಿಲ್ಲಿನಂತೆ ಭಾಗಿಸಿ ಮೇಲಕ್ಕೆಳೆದುಕೊಳ್ಳಿ. ಅಂತಿಮ ಸ್ಥಿತಿಯಲ್ಲಿ ಇಡೀ ದೇಹದ ಭಾರ ಹೊಟ್ಟೆಯ ಮೇಲಿರುತ್ತದೆ.

ಮಂಡಿಗಳು ಕೂಡಿದ್ದಾಗ ದೇಹವನ್ನು ಮೇಲೆಳೆಯುವುದು ಕಷ್ಟ ಎನಿಸಿದರೆ ಮಂಡಿಗಳ ಮಧ್ಯೆ ಒಂದು ಅಡಿಯಷ್ಟು ಅಂತರ ಬರುವಂತೆ ಬಿಡಿಸಿ ಮೇಲೆಳೆಯಿರಿ. ಮುಖ ಮೇಲೆ ನೋಡುತ್ತಿರಲಿ. ಸಾಮಾನ್ಯ ಉಸಿರಾಟ ನಡೆಸುತ್ತಾ ಅಂತಿಮ ಸ್ಥಿತಿಯಲ್ಲಿ 8ರಿಂದ 10 ಸೆಕೆಂಡು ನೆಲೆಸಿ ವಿರಮಿಸಿ. ನಾಲ್ಕಾರು ಬಾರಿ ಪುನರಾವರ್ತನೆ ಮಾಡಿ. ಅಂತಿಮ ಸ್ಥಿತಿಯಲ್ಲಿ ನೆಲೆಸುವ ಸಮಯವನ್ನು ನಿಮಿಷಗಳ ವರೆಗೆ ವಿಸ್ತರಿಸಬಹುದು.

ಪ್ರಯೋಜನಗಳು: ಸೊಂಟ ನೋವು ನಿವಾರಣೆ. ಎದೆಯು ವಿಶಾಲವಾಗಿ ಹಿಗ್ಗುವುದು. ಬೆನ್ನು ನೋವು ಇಲ್ಲವಾಗಿ ಗೂನು ಬೆನ್ನಿನ ದೋಷ ಸರಿಪಡಿಸಲು ಅತ್ಯುತ್ತಮ ಆಸನ. ಜೀರ್ಣ ಶಕ್ತಿ ವೃದ್ಧಿಸಿ, ಉದರ ದೋಷ, ಹೆಚ್ಚಿನ ಕೊಬ್ಬು ನಿವಾರಣೆ. ಭುಜ, ತೋಳು, ತೊಡೆಗೆ ಉತ್ತಮ ವ್ಯಾಯಮ ದೊರೆತು ಶಕ್ತಿ ವೃದ್ಧಿ.
ಮುನ್ನೆಚ್ಚರಿಕೆ: ಹೊಟ್ಟೆ ಮತ್ತು ಬೆನ್ನಿನ ಹಾಗೂ ಭುಜಗಳ ಶಸ್ತ್ರ ಚಿಕಿತ್ಸೆಗಳಾಗಿದ್ದರೆ ಅಭ್ಯಾಸ ಮಾಡಕೂಡದು. ಚಿಕಿತ್ಸೆಯಾಗಿ ಆರು ತಿಂಗಳ ಬಳಿಕ ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಬೇಕು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Shivakumara G.N. M.A, B.Ed, YIC
YOGA Instructor, International Yoga Champion
Contact/wp: 94802 25879 Email: shivugn80@gmail.com

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಆರೋಗ್ಯ

To Top