-ಬಸವರಾಜ ಸಿರಿಗೆರೆ
ಪರಿಸರ ಸಂರಕ್ಷಣೆ ಸರಕಾರದ ಹೊಣೆ, ನಮ್ಮದೇನಿದ್ದರೂ ನೈಸರ್ಗಿಕ ಸಂಪನ್ಮೂಲಗಳ ಭಕ್ಷಣೆ ಎಂಬ ಮನೋಭಾವನೆ ಹಲವರದು. ಸಮಾಜದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಂಕಲ್ಪಿಸಿ, ನಾಡು, ನುಡಿ, ಜಲ, ಭಾಷೆ, ಪರಿಸರ ಸಂರಕ್ಷಣೆಗೆ ತಪೋನಿಷ್ಠರಾಗಿ ಪರಿಹಾರ ಸೂತ್ರದ ಅನುಷ್ಠಾನದ ಸಾಕಾರಮೂರ್ತಿಗಳಾಗಿ ಧಾರ್ಮಿಕ ವಿಚಾರಧಾರೆಗಳಿಗೆ ಸೀಮಿತವಾಗಿರದೇ ಬರಗಾಲದಿಂದಾಗಿ ತತ್ತರಿಸುತ್ತಿರುವ ಲಕ್ಷಾಂತರ ರೈತರ ಆರಾಧಕರಾಗಿ ಭಗೀರಥ ಸ್ವರೂಪಿಗಳು, ನಾಡಿನ ಅನರ್ಘ ರತ್ನ, ಬಹುಭಾಷ ಪಂಡಿತೊತ್ತಮರು, ವೈಚಾರಿಕ ಅರಿಕಾರರು, ಗುರುಗಳಿಗೆ ಗುರುಸರ್ವಾಭೌಮರಾದ ಶ್ರೀ ಮದ್ದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಜೀವ ಜಲ ಹಾಗೂ ಪರಿಸರ ಕಳಕಳಿಗೆ ಇಡೀ ನಾಡೇ ಬೆರಗಾಗಿದೆ.
ಜಗಳೂರು,ಚನ್ನಗಿರಿ,ದಾವಣಗೆರೆ, ತರೀಕೆರೆ, ಹಳೇಬೀಡು, ಭರಮಸಾಗರ, ಸಿರಿಗೆರೆ, ವ್ಯಾಪ್ತಿಯ ನೂರಾರು ಕೆರೆಗಳಿಗೆ ನೀರು ತುಂಬಿಸುವ ಭಗೀರಥ ಪ್ರಯತ್ನದಲ್ಲಿ ಯಶಸ್ಸು ಕಂಡು ಮಹತ್ವಾಕಾಂಕ್ಷಿ ಯೊಜನೆಗಳ ನಿರ್ಮಲ ಕಾರ್ಯದ ಜಲಋಷಿ ಅಭಿದಾನದ ತರಳಬಾಳು ಶ್ರೀ ಜಗದ್ಗುರುಗಳವರ ಕರೆಗೆ ತುಂಗೆ ಭದ್ರೆಯರೇ ಕೆರೆಗಳಲ್ಲಿ ಅವಿರ್ಭವಿಸಿರುವುದು ಸೋಜಿಗವೆನಿಸುತ್ತದೆ.
ಸಸ್ಯರಾಶಿ ಮತ್ತು ಜೀವ ಜಲದ ಬಗ್ಗೆ ತ್ರೀಕಾಲವೂ ಚಿಂತಿಸುವ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರಿಗೆ 1987 ರಲ್ಲಿಯೇ ಭಾರತ ಸರ್ಕಾರವು ಇಂದಿರಾ ಪ್ರಿಯದರ್ಶನಿ ವೃಕ್ಷಮಿತ್ರ ಪ್ರಶಸ್ತಿ ನೀಡಿದೆ. ವಿನಾಶದ ಅಂಚಿನಲ್ಲಿರುವ ಆಯುರ್ವೇದ ವೈದ್ಯಕೀಯ ಸಸ್ಯಗಳ ಸಂರಕ್ಷಣೆಗಾಗಿ 2002 “Certificate Of Excellence” ಗೌರವ ಪುರಸ್ಕಾರದಂತಹ ಮನ್ನಣೆಗೆ ಪಾತ್ರರಾಗಿ ಆ ಗೌರವಗಳಿಗೆ ಇನ್ನೂ ಹೆಚ್ಚಿನ ಮನ್ನಣೆಯನ್ನು ಹೆಚ್ಚಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಪರಿಸರವನ್ನು ಸುರಕ್ಷಿತವಾಗಿಡಲು ಶ್ರೀ ಜಗದ್ಗುರುಗಳವರು ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿದ್ದಾರೆ. 1990 ರ ದಶಕದಲ್ಲಿ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ 421 ಹಳ್ಳಿಗಳಲ್ಲಿ 4426 ಶೌಚಾಲಯಗಳ ನಿರ್ಮಾಣ ಕಾರ್ಯಕ್ಕೆ ಅನುಗ್ರಹಿಸಿ ಸ್ವಚ್ಚ ಭಾರತದ ಕಲ್ಪನೆಗೆ ಅಂದೇ ಮುನ್ನುಡಿ ಬರೆದಿದ್ದಾರೆ. ದಾವಣಗೆರೆಯಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರವನ್ನು ದಶಕದ ಹಿಂದೆಯೇ ಸ್ಥಾಪಿಸಿ ನಾಲ್ಕು ಜಿಲ್ಲೆಗಳ ರೈತರಿಗೆ ನಿತ್ಯವು ಸಲಹೆ ಸೂಚನೆ ನೀಡುವ ರೈತ ಸ್ನೇಹಿ ಕೇಂದ್ರವನ್ನಾಗಿಸಿದ್ದಾರೆ.
ಕಳೆದ ವರ್ಷ ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಸಾವಿರಾರು ವಿದ್ಯಾರ್ಥಿಗಳು ,ಶಿಷ್ಯ ಸಮುದಾಯದ ಜೊತೆಗೂಡಿ ಕಳೆದ ವರ್ಷ 10 ಲಕ್ಷ ಬೀಜದುಂಡೆ ತಯಾರಿಸಿ ಮೆದಿಕೆರೀಪುರ ಸಮೀಪದ ಶ್ರೀ ಮಠಕ್ಕೆ ಸೇರಿದ ಸಾವಿರಾರು ಎಕರೆ ವ್ಯಾಪ್ತಿಯ ಶ್ರೀ “ಶಿವಕುಮಾರವನ”ದಲ್ಲಿ ಬೀಜದುಂಡೆಗಳನ್ನು ಭೂ ತಾಯಿಯ ಮಡಿಲಿಗೆ ಸಮರ್ಪಿಸಿದ್ದು ಇನ್ನೂ ಹಸಿರಾಗಿದೆ.
ವಿಶ್ವ ಪರಿಸರ ದಿನದಂದು ಸ್ವಚ್ಛ ಪ್ರಕೃತಿಯ ಶುಭ್ರ ಮನದ, ಮಾತೃ ಹೃದಯದ, ಶಿಷ್ಯರ ಉದ್ದಾರಕ್ಕೆ ತ್ರೀಕಾಲವೂ ಶ್ರಮಿಸುವ ಸಂಕಲ್ಪ ಋಷಿಯಾದ ಕನ್ನಡ ನಾಡಿನ ಪ್ರತ್ಯಕ್ಷ ದೇವರಾದ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಲೋಕಮುಖಿ ಕೈಂಕರ್ಯಗಳನ್ನು ಭಕ್ತಿಯಿಂದ ಸ್ಮರಿಸದೇ ಇರಲು ಸಾಧ್ಯವೇ…?