ಪ್ರಮುಖ ಸುದ್ದಿ
ಕೊರೊನಾದಿಂದ ಮುಕ್ತಿ ಇದೆಯೋ ಅಥವಾ ಮೋಕ್ಷವಿದೆಯೋ..!
ಕೊರೊನ ವೈರಸ್‌ನಿಂದ ಮುಕ್ತಿಯಂತು ಇಲ್ಲ. ಆದರೆ, ಕೊರೊನಾ ಇರುವುದರಿಂದ ನಮ್ಮಲ್ಲೆಇರುವ ಅನೇಕ ಕೆಟ್ಟ ಅಭ್ಯಾಸಗಳಿಗೆ ಮುಕ್ತಿ ಇದೆ. ಮನುಷ್ಯನಲ್ಲಿಎಲ್ಲಿಯವರೆಗೇ ಶಿಸ್ತು ಮತ್ತು ಒಳ್ಳೆಯ ಅಭ್ಯಾಸಗಳು ರೂಢಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲಾ ಒಂದು ವೈರಾಣು ಮನುಷ್ಯರಿಗೆ ಮಾರಕವಾಗಿರುತ್ತದೆ.
ಯಾರಾದರೂ ಕೊರೊನ ವೈರಸ್‌ನ್ನು ಭೂಮಿಯಿಂದ ಮುಕ್ತಿಗೊಳಿಸಬಹುದು ಎಂದುಕೊಂಡಿದ್ದರೆ, “ಆ ಭ್ರಮೆಯಲ್ಲಿಇರುವುದು ಬೇಡ” ಭೂಮಿಯ ಮೇಲೆ ಮನುಷ್ಯ ಇರುವವರೆಗೂ ಕೊರೊನಾ ವೈರಸ್ ಸಹ ಇದ್ದೇ ಇರುತ್ತದೆ.
ನಾವೇನಾದರೂ ಊರಿಗೆ – ನಗರಕ್ಕೆ ಬ್ಯಾರಿಕೇಡ್ ಹಾಕಿ (ಅಡ್ಡಗಟ್ಟಿ), ನಮ್ಮಓಣಿಗೆ – ಮನೆಯ ಮುಂದೆ, ಜಾಲಿ ಮುಳ್ಳಿನ ಬೇಲಿ ಹಾಕಿ ಕೊರೊನಾದಿಂದ ಮುಕ್ತರಾಗುತ್ತೇವೆಂದು ಭಾವಿಸಿದರೆ, ಅದುತಪ್ಪುಕಲ್ಪನೆ – ಭ್ರಮೆಯೇ ಸರಿ.
ಒಂದು ಗಮನಿಸುವ ವಿಚಾರವೆನೆಂದರೆ, ಎಲ್ಲಾ ತರಹದ ರಕ್ಷಣ ಕವಚ ಮತ್ತು ಸಲಕರಣೆಗಳನ್ನು ಉಪಯೋಗಿಸಿಯೂ, ಕೊರೊನ ವೈರಸ್ ರೋಗಿಗಳ ಸೇವೆಯಲ್ಲಿದ್ದ ಸುಮಾರು 15-16 ಸಾವಿರ ಕೋವಿಡ್ ವಾರಿಯರ್ಸ್ ಗಳಲ್ಲಿ ಸೊಂಕು ತಗುಲಿದ ನಿದರ್ಶನsSಠಿಚಿ ಸ್ಪೆನ್ , ಯೂರೋಪ್, ಮತ್ತು ಅಮೆರಿಕಾದಲ್ಲಿನ ಬಹಳಷ್ಟು ದೇಶಗಳಲ್ಲಿ ಕಂಡಿದ್ದೇವೆ. ಇದರ ಅರ್ಥವೇನೆಂದರೆ, ನಾವು ಎಷ್ಟೇ ಜಾಗರೂಕತೆಯಿಂದಇದ್ದರೂ ವೈರಸ್‌ನ ಸೊಂಕಿನಿಂದ ತಪ್ಪಿಸಿಕೊಳ್ಳಲು ಸಾದ್ಯವಾಗಿಲ್ಲ.
ಸುಮಾರು 35 ಕೋಟಿ ಜನಸಂಖ್ಯೆಯಿರುವ, ಅಭಿವೃದ್ದಿ ಹೊಂದಿದದೇಶವಾದ ಅಮೇರಿಕಾದಲ್ಲಿ, ವೈರಸ್‌ಗಳಿಗೆ ಹೇಳಿಮಾಡಿಸಿದಂತ ಚಳಿಯ ವಾತಾವರಣ ಹಾಗೂ ಬಹುತೇಕ ವಯೋವೃದ್ದರಿದ್ದರೂ, ಕಳೆದ 2 ತಿಂಗಳುಗಳ ಕಾಲ ಕೋವಿಡ್-19 ತನ್ನಅಟ್ಟಹಾಸ ಮೆರೆದಿದ್ದರೂ, ಇದುವರೆಗೂ ಸಾವಿನ ಸಂಖ್ಯೆ 1 ಲಕ್ಷ ಮೀರಲಾಗಲಿಲ್ಲ. ಇದರ ಅರ್ಥವೇನೆಂದರೆ ಈ ವೈರಾಣುವಿನ ಮಾರಕಕ್ಷಮತೆ ನಾವು ಊಹಿಸಿದಷ್ಟಿಲ್ಲ. ಅದರಲ್ಲೂ ಸಾವನ್ನಪ್ಪಿರುವ ಜನರನ್ನು ವಿಶ್ಲೇಶಿಸಿದರೆ –ಅದರಲ್ಲಿ ಬಹುತೇಕ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂದಿದ್ದು, ಅವರು ಬೇರೆ ಯಾವ ವೈರಸ್ ಅಥವಾ ಕೀಟಾಣುಗಳ ಸೊಂಕು ತಗುಲಿದ್ದರೂ ಸಹ ಅದರ ಪರಿಣಾಮದಲ್ಲಿ ಬದಲಾವಣೆ ಆಗುತ್ತಿದ್ದಿಲ್ಲ.
ಪ್ರಪಂಚದಲ್ಲಿಅತ್ಯುತ್ತಮವಾದ ಆರೋಗ್ಯ ವ್ಯವಸ್ಥೆ ಹೊಂದಿರುವಂತಹ ಪಾಶ್ಚಿಮಾತ್ಯ ದೇಶಗಳೇ ಕೊರೊನಾ ವಿರುದ್ಧದ ಸೆಣೆಸಾಟದಲ್ಲಿ ಮಂಡಿಯೂರಿದೆ. ಏಕೆಂದರೆ ಆ ದೇಶಗಳು ಕೊರೊನ ವೈರಸ್‌ನ್ನು ಕೇವಲವಾಗಿ ಭಾವಿಸಿದ್ದವು (Under Estimated ). ಅದೇತರಹ ನಮ್ಮ ದೇಶದಲ್ಲಿ ಕೊರೊನಾವನ್ನು ಅತಿಯಾಗಿ ಅಂದಾಜು (Over Estimated ) ಮಾಡಿಕೊಂಡಿದ್ದೇವೆ. ಆದ್ದರಿಂದಲೇಐoಛಿಞಜoತಿಟಿ ೪೫ ದಿನವಾದರೂ ಮುಂದುವರಿಸುತ್ತಲೇಇದ್ದೇವೆ.
ಈ ಹಿಂದೆ 2008-09 ರಲ್ಲಿ ಬಂದಂತಹ ವೈರಲ್ FLU ಗಳಾದ ಹಂದಿ ಜ್ವರ (H1N1), ಹಕ್ಕಿ ಜ್ವರ (Bird flu) ಇವುಗಳಿಗೆ ಹೋಲಿಸಿದರೆ covid ನ ಮಾರಕಕ್ಷಮತೆ ಕೇವಲ 5 ರಿಂದ 6% ಮಾತ್ರ ಹೆಚ್ಚು. ನೀವು ಗಮನಿಸಿದ ಹಾಗೆ ಆ ಕಾಲದಲ್ಲಿ ವೈದ್ಯರಾಗಲಿ ಅಥವಾರೋಗಿಯಾಗಲಿ ಇಷ್ಟೊಂದು ಭಯಬೀತಾರಾಗಿದ್ದಿಲ್ಲ. ಆದರೆ ಈಗ covid-19 ಗೆ ಯಥೇಚ್ಛ ಪ್ರಚಾರ ಸಿಕ್ಕು, ಮಾಧ್ಯಮಗಳಲ್ಲಿ ಅದನ್ನು ಯಮನೆಂದೆ ಬಿಂಬಿಸಲಾಗಿದೆ. ಅಂದರೆ ಯಾರಿಗಾದರೂ covid ನ ಸೊಂಕು ತಗುಲಿದರೆ ಬಹಳಷ್ಟು ತೊಂದರೆಗೀಡಾಗುತ್ತಾರೆ ಅಥವಾ ಸಾವನ್ನಪ್ಪುತ್ತಾರೆ ಎಂಬ ಭಯ ಮತ್ತು ಭ್ರಾಂತಿ ಮೂಡಿಸಲಾಗಿದೆ.ಇದರಿಂದ ಇಡೀ ದೇಶದಲ್ಲಿFEAR PSYCHOSIS ವಾತಾವರಣ ಸೃಷ್ಟಿಯಾಗಿದೆ.
ಹಾಗಾದರೆಕೊರೊನಾವನ್ನುತಡೆಗಟ್ಟಲು ನಾವು ತೆಗೆದುಕೊಳ್ಳುತ್ತಿರುವ ಕ್ರಮ ಸರಿಯಿದೆಯೇ?
ಹೌದು ನಾವು ಭಾಗಶಃ ಸರಿಯಾಗಿದ್ದೇವೆ. ಇದುವರೆಗೂ ಕೈಗೊಂಡಿರುವ ಕ್ರಮಗಳಲ್ಲಿ, ನಾವು ಆಡಿರುವ ರೀತಿ ನೋಡಿದರೆ ತಲ್ಲಣದ ಪ್ರತಿಕ್ರಿಯೆ (Panic Recation) ತರಹ ಜಾಸ್ತಿ ಇದೆ. ಇದೆಲ್ಲ ನಡೆದದ್ದುಏಕೆಂದರೆ ನಮಗೆ ಈ ವೈರಸ್ ಮತ್ತುಇದರಿಂದಾಗುವ ಅನರ್ಥಗಳು ಮತ್ತು ಮಾರಕತೆಯ ಬಗ್ಗೆ ತಿಳುವಳಿಕೆ ಕಮ್ಮಿಇದ್ದುದರಿಂದ ಈ ರೀತಿ ನಡೆದುಕೊಂಡಿರುತ್ತೇವೆ.
Lockdown ನಿಂದಾಗಿ ವೈರಸ್ ಹರಡುವ ನಾಗಾಲೋಟಕ್ಕೆ ಕಡಿವಾಣ ಹಾಕಿಂದತಾಗಿದೆ ಮತ್ತು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ವೈರಾಣುವಿನ ವಿರುದ್ಧ ಹೋರಾಡಲು ಸನ್ನಧ್ದರಾಗಲು ಸಮಯ ಸಿಕ್ಕಿದೆ. ಹಾಗೂ ನಾಗರಿಕರಿಗೆಕೊರೊನ ಕಾಯಿಲೆಯ ಮತ್ತು ಸಾಮಾಜಿಕ ಅಂತರದ ಬಗ್ಗೆ ಜಾಗರೂಕತೆ ಮೂಡಿಸುವಂತಾಗಿದೆ. ಇದರಿಂದ ವೈರಾಣುವಿನ ಹರಡುವಿಕೆಯನ್ನುಕಡಿಮೆ ಮಾಡಬಹುದು ವಿನಃ ಸಂಪೂರ್ಣವಾಗಿ ವೈರಾಣುವನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ.
ಶಾಲೆಗಳು, ಕಾಲೇಜ್‌ಗಳು, ಆಪೀಸ್‌ಗಳು, ಕಾರ್ಖಾನೆಗಳು, ವ್ಯವಹಾರಿಕ ಜಾಗಗಳು, ಸಾರಿಗೆಗಳನ್ನು ಅನಿರ್ದಿಷ್ಟವಾಗಿ ನಿಲ್ಲಿಸಿ ದೇಶವನ್ನು ಮತ್ತುಅಲ್ಲಿನ ಜನರನ್ನು ಆರ್ಥಿಕ ಕಂಟಕಕ್ಕೆ ತಳ್ಳುವುದರಲ್ಲಿ ಯಾವ ಪ್ರಯೋಜನವಿಲ್ಲ.
ಹಾಗಾಗಿ ಲಾಕ್ ಡೌನ್ ಲಾಭಗಳು ತಾತ್ಕಾಲಿಕ ಮತ್ತು ಸೀಮಿತ. ಇದನ್ನೆ ನಾವು ಬಹಳಷ್ಟು ತಿಂಗಳುಗಳ ಕಾಲ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಈ ವೈರಾಣು ನಮ್ಮ ಜೊತೆಯಲ್ಲೆಇದ್ದೇ ಇರುತ್ತದೆ ಎಂಬುವುದು ಕಟು ಸತ್ಯ. ಮತ್ತುದೇಶಕ್ಕೆಆರ್ಥಿಕ ಸಂಕಷ್ಟಗಳ ಸುನಾಮಿಯೇ ಎದುರಾಗುವ ಸಮಸ್ಯೆ ಕಾಡುತ್ತಿದೆ.
ವೈರಾಣುವಿನ ಸೊಂಕನ್ನುತಡೆಯಲು ಕೇವಲ 2 ಮಾರ್ಗಗಳಿವೆ
1.ನಮ್ಮದೇಹದಲ್ಲಿ ವೈರಾಣುವಿನ ವಿರುದ್ದ ನೈಸರ್ಗಿಕವಾಗಿ Antibody ಗಳು ಉತ್ಪತ್ತಿಯಾಗುವುದು.
2. ಲಸಿಕಾ ವಿಧಾನದಿಂದ (vaccination) Antibody ಗಳು ಉತ್ಪತ್ತಿಯಾಗುವುದು.
ನಮ್ಮದೇಹದಲ್ಲಿ ನೈಸರ್ಗಿಕವಾಗಿ Antibody ಗಳು ಉತ್ಪತ್ತಿಯಾಗಬೇಕೆಂದರೆ ನಾವು ಆ ವೈರಾಣುವಿನಿಂದ ಸೊಂಕಿತರಾಗಿಗುಣಮುಕ್ತರಾಗಬೇಕು.ಈ ಮೇಲಿನ ಕ್ರಿಯೆಯಿಂದಲೆ vaccination ಪದ್ಧತಿಯ ಮೂಲಕ ನಮ್ಮದೇಹದಲ್ಲಿ ವೈರಾಣುವಿನ ವಿರುದ್ದ ಅರ್ಜಿಸಿದ ರಕ್ಷಣೆಯನ್ನು (AquiredIumunity) ಸಹ ಪಡೆಯಬಹುದು.
ಒಂದು ಲಸಿಕೆಯನ್ನು (vaccine) ಕಂಡುಹಿಡಿದು, ಅದನ್ನು ಸಾಮಾನ್ಯ ಜನರು ಮತ್ತು ರೋಗಿಗಳ ಮೇಲೆ ಪ್ರಯೋಗ ಮಾಡಿ, ಅದು ಲಾಭಕಾರಿಯೇಎಂದು ಧೃಢಪಡಿಸಿ, ಜನಸಾಮಾನ್ಯರ ಉಪಯೋಗಕ್ಕೆ ತರಬೇಕೆಂದರೆ, ಸುಮಾರುಒಂದರಿಂದ ಒಂದೂವರೆ ವರ್ಷಗಳ ಕಾಲ ಬೇಕಾಗುತ್ತದೆ. ಅಲ್ಲಿಯವರೆಗೂ ಇದೇ ತರಹದ ಲಾಕ್ ಡೌನ್ ಮುಂದುವರೆಸಲು ಸಾಧ್ಯವೇ ..???
ಒಂದು ವಿಚಾರ ಗಮನಿಸಿಬೇಕಾದರೆ ಔಷಧಗಳಿಂದ ಈ ಕೊರೊನ ಸಾಂಕ್ರಮಿಕವನ್ನುತಡೆಯಲು ಸಾಧ್ಯವಿಲ್ಲ. ಔಷಧಿಗಳಿಂದ ಕೇವಲ ಚಿಕಿತ್ಸೆ ಮಾಡಬಹುದಷ್ಟೆ.
ಕೊರೊನ ವೈರಸ್‌ನ ಸೊಂಕಿನ ವಿಶ್ಲೇಷಣೆ:-
ಸುಮಾರು ನೂರುಜನರಿಗೆ ಈ ವೈರಾಣುವಿನಿಂದ ಸೊಂಕು ತಗುಲಿದರೆ, ಅದರಲ್ಲಿ 65 ರಿಂದ 70% ಜನರಿಗೆ ತಮ್ಮಲ್ಲಿ ವೈರಸ್‌ನ ಸೊಂಕು ಯಾವಾಗ ಬಂದಿದೆ – ಯಾವಾಗ ಹೋಗಿದೆ ಅನ್ನುವುದರ ಅರಿವೇಇರುವುದಿಲ್ಲ.
ಇನ್ನು ಸುಮಾರು 15 ರಿಂದ 20% ಜನರಲ್ಲಿ Mild – Moderate ಲಕ್ಷಣಗಳಿರುತ್ತವೆ.
ಸುಮಾರು 5 ರಿಂದ 10% ಜನರಲ್ಲಿ ಲಕ್ಷಣಗಳು ತೀವ್ರವಾಗಿಕಂಡುಬಂದು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಸುಮಾರು 0.5 ರಿಂದ 1 % ರೋಗಿಗಳಿಗೆ ಮಾತ್ರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಬೇಕಾಗಬಹುದು.
ಸೊಂಕಿನ ತೀವ್ರತೆ ಬಹಳಷ್ಟು ಆಗುವ ಜನರು ಯಾರೆಂದರೇ ಹಿರಿಯ ವಯಸ್ಕರು (more than 60 years) ಮತ್ತು (co-morbid conditions) ಗಂಭೀರ ಕಾಯಿಲೆಗಳ ಹಿನ್ನಲೆ ಉಳ್ಳವರು.
ಸಮುದಾಯದಲ್ಲಿಎಲ್ಲಿಯವರೆಗೆ ಸುಮಾರು 60 ರಿಂದ 70 % ಜನರಲ್ಲಿ ರೋಗ ನಿರೋಧಕ (Herd Immunity) ಬರುವುದಿಲ್ಲವೋ, ಅಲ್ಲಿಯವರೆಗೆ ಯಾವ ಸಾಂಕ್ರಮಿಕ ರೋಗವನ್ನು ತಡೆಯಲು ಸಾಧ್ಯವಿಲ್ಲ. ಇದು ಆಗಬೇಕೆಂದರೆ ಮನುಷ್ಯನು ಮೇಲೆ ತಿಳಿಸಿರುವ Antibody ಉತ್ಪನ್ನ ಮಾಡುವ 2 ಮಾರ್ಗಗಳಲ್ಲಿ (ಕೇವಲ ಸೊಂಕಿತನಾಗಿ–ಗುಣಮುಕ್ತರಾಗಿ) ದೇಹದಲ್ಲಿರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡುವುದೊಂದೆ ದಾರಿ ಉಳಿದಿದೆ.
ನಮ್ಮ ದೇಶದಲ್ಲಿಇತರೆ ಸಾಂಕ್ರಮಿಕ ಕಾಯಿಲೆಗಳಾದ ಕ್ಷಯರೋಗ (T B), ಶ್ವಾಸಕೋಶದ ಸೊಂಕು Pnemonia ದಿಂದ ಮರಣ ಹೊಂದುವವರ ಸಂಖ್ಯೆಯನ್ನು ಗಮನಿಸಿದರೆ, ಕೊರೊನದಿಂದಾಗುವ ಸಾವಿನ ಸಂಖ್ಯೆ ಲೆಕ್ಕಕ್ಕೆ ಇಲ್ಲದಷ್ಟು.
ಹಾಗೆಯೇ ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಮೆದುಳು ರಕ್ತ ಸ್ರಾವ, ಅಪಘಾತಗಳಿಂದ ಸಂಭವಿಸುವ ಸಾವುಗಳಿಗೆ ಹೋಲಿಸಿದರೇ ಕೇವಲ ಕೊರೊನದಿಂದಾಗುವ ಸಾವುಗಳು ಯಾವ ಲೆಕ್ಕಕ್ಕೂ ಇಲ್ಲ.
ಅದೇತರಹ ಶ್ವಾಸಕೋಶದ ಸೊಂಕು ತಗಲಿಸುವ ಬೇರೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಮಾರಕ ಶಕ್ತಿಯನ್ನು ಹೋಲಿಸಿದರೆ ಕೋವಿಡ್‌ನ ಶಕ್ತಿ ಸ್ವಲ್ಪನೆ (3-5%) ಜಾಸ್ತಿ ಇರಬಹುದಷ್ಟೆ.
ನಾವು ದಿನನಿತ್ಯವು ಮಾದ್ಯಮಗಳಲ್ಲಿ ಸೊಂಕಿನ ಅಂಕಿಅಂಶಗಳನ್ನು ಗಮನಿಸುತ್ತಿದ್ದರೆ, ಅದು ಭೀತಿಯುಂಟು ಮಾಡಿ ನಮಗೆ ತಪ್ಪುದಾರಿಗೆ ತಳ್ಳುತ್ತಿದೆ.ಯಾಕೆಂದರೆ ಈ ಮೊದಲು ತಿಳಿಸಿದ ಹಾಗೆ ವೈರಸ್ ಪಾಸಿಟಿವ್ ಅಂದಾ ಕ್ಷಣ ರೋಗಿಗೆ ಕ್ಲಿಷ್ಟಕರ ಸಮಯ ಮತ್ತು ಸಾವಿಗೀಡಾಗುತ್ತಾನೆಂದು ಬಿಂಬಿಸಲಾಗಿದೆ. ಆದ್ದರಿಂದ ನಾವು ಅಂಕಿಅಂಶಗಳನ್ನು ಈ ಕೆಳಗಿನ ರೀತಿಯಲ್ಲಿ ವಿಶ್ಲೇಷಿಸಬೇಕು.
- Covid Positive + Asymptomatic (ಕಾಯಿಲೆಯಯಾವುದೇ ಲಕ್ಷಣಇಲ್ಲದಿರುವುದು)
- CovidPositive +Mild / Moderate symptoms (ಕಾಯಿಲೆಯ ಸಾಧಾರಣ ಲಕ್ಷಣ ಇರುವುದು)
- Covid Positive +Severe symptoms (ಕಾಯಿಲೆಯತೀವ್ರ ಲಕ್ಷಣಇರುವುದು
- Covid Positive +ICU Dependent (ತೀವ್ರ ನಿಗಾ ಘಟಕದಅವಶ್ಯಕತೆಇರುವುದು)
ಇವುಗಳಲ್ಲಿ ಮೊದಲ 2 ಕಲಂ ಗಳಲ್ಲಿ ಸುಮಾರು 90 – 95 % ರೋಗಿಗಳು ಸೇರುತ್ತಾರೆ.
ಹೀಗಿರುವಾಗ ಕೋವಿಡ್‌ನಿಂದ ಹೆದರಿಕೊಂಡು ಪಂಜರಲ್ಲಿರುವುದು ಎಷ್ಟು ಸೂಕ್ತ???
ಈಗ ನಾವು Lockdown ನಿಂದ ಹೊರಗೆ ಬರಲೇಬೇಕು, ಏಕೆಂದರೆ ಸಮುದಾಯದಲ್ಲಿರೋಗ ನಿರೋಧಕ ಶಕ್ತಿ (Herd Immunity) ಹೆಚ್ಚಿಸಲೇಬೇಕು ಮತ್ತು ಕಂಗೆಟ್ಟಿರುವಆರ್ಥಿಕ ಸ್ಥಿತಿಯನ್ನು ಸುಧಾರಿಸಲೇಬೇಕು.
ಕಳೆದ 2 ತಿಂಗಳಿಂದ ನಡೆದಿರುವ ವಿದ್ಯಮಾನಗಳಿಂದಾಗಿ ಆರ್ಥಿಕ ಸಂಕಷ್ಟದಿಂದಾಗಿರುವ ದುಷ್ಪರಿಣಾಮಗಳಿಂದ ಜೀವ ಮತ್ತು ಜೀವನ ಎರಡಕ್ಕೂ ಹೊಡೆತ ಬಿದ್ದಿದೆ.
ಇದನ್ನೆಲ್ಲಾ ಗಮನಿಸುತ್ತಿದ್ದರೆ ಮೇಲ್ನೋಟಕ್ಕೆ ಕಾಣಿಸಿಕೊಳ್ಳುವ ಕಟು ಸತ್ಯವೇನೆಂದರೆ “ನಾವು ಕೊರೊನ ವೈರಸ್ ಜೊತೆ ಬದುಕಲೇ ಬೇಕು” ಹಾಗೂ ವೈರಸ್ ಜೊತೆ ಬದುಕಲು ಸೂಕ್ತ ದಾರಿಯನ್ನು ರೂಪಿಸಿಕೊಳ್ಳಬೇಕು.
ಜೀವನದಲ್ಲಿ ಸ್ವಲ್ಪ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಂಡು ಕೆಳಗಿನ ನವಸೂತ್ರಗಳನ್ನು ಪಾಲಿಸಬೇಕಾಗುತ್ತದೆ.
- ಮನೆಯಿಂದ ಹೊರಗಿದ್ದಾಗಕಡ್ಡಾಯವಾಗಿ ಸಾಮಾಜಿಕಅಂತರವನ್ನು ಕಾಯ್ದುಕೊಳ್ಳುವುದು (Social Distancing)
- ಮನೆಯಿಂದ ಹೊರಗಿದ್ದಾಗಕಡ್ಡಾಯವಾಗಿ ಮಾಸ್ಕ್ಧರಿಸುವುದು
- ಎಲ್ಲೆಂದರಲ್ಲಿ ಉಗುಳದೇ ಇರುವುದು
- ಆಗಿಂದಾಗ್ಗೆ ಸಾಬೂನಿನಿಂದ ಕೈ ತೊಳೆಯುವುದು
- ಸ್ಯಾನಿಟೈಸರ್ ಬಳಸುವುದು
- ವೃದ್ದರನ್ನು ಮತ್ತು ಮಕ್ಕಳನ್ನು ಜವಬ್ದಾರಿಯಿಂದ ನೋಡಿಕೊಳ್ಳುವುದು
- ನಮ್ಮ ಸ್ವಲ್ಪ ಸಮಯ ಮತ್ತು ಹಣವನ್ನು, ನಮ್ಮಆರೋಗ್ಯಕ್ಕಾಗಿ ಮೀಸಲಿಡುವುದು
- ನಮ್ಮಗ್ರಾಮ, ಪಟ್ಟಣ, ನಗರಗಳನ್ನು ಸ್ವಚ್ಛವಾಗಿಡುವುದು
- ಸಕಾರಾತ್ಮಕ ಮತ್ತುಗುಣಾತ್ಮಕ ಮನೋಭಾವದಿಂದ ವೈರಸ್‌ನ್ನುಎದುರಿಸುವುದು
ಈ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು – ಪಾಲಿಸುವುದರಿಂದ ಇನ್ನು ಮುಂದೆಕೊರೊನಾದಂತಹ ನೂರಾರು ವೈರಾಣುಗಳಾಗಲಿ – ಕೀಟಾಣುಗಳಾಗಲಿ ಬಂದರೂ ನಾವು ಈಗಿರುವಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದಿಲ್ಲ.
ಭೂಮಿಯ ಮೇಲಿನ ಅಸಂಖ್ಯಾತ ಜೀವರಾಶಿಗಳನ್ನು ಮತ್ತು ಪರಿಸರವನ್ನು ಗೌರವಿಸಿ, ಅವುಗಳಿಗಿರುವ ಸ್ವಾತಂತ್ರಕ್ಕೆ ಕುಂದು ಬರದ ಹಾಗೆ ನೋಡಿಕೊಂಡು, ಅವುಗಳ ಸಂರಕ್ಷಣೆಕಡೆಗೆ ಗಮನ ಹರಿಸಿದರೆ ಮಾತ್ರ ಮಾನವ ಸಂಕುಲಕ್ಕೆ ಇಂತಹ ವಿಪತ್ತುಗಳಿಂದ ಮೋಕ್ಷವಿದೆ.
ಲೇಖಕರು: ಡಾ|| ಬಿನಯ್‌ಕುಮಾರ್ ಸಿಂಗ್
ಡಾ|| ಮನೋಜ್‌ಕುಮಾರ್ ಪೂಜಾರ್
ಸನ್ ಶೈನ್ ಪುರಂತರ ಆಸ್ಪತ್ರೆ ದಾವಣಗೆರೆ,
ಪೂಜಾಆಸ್ಪತ್ರೆ, ದಾವಣಗೆರೆ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com