ಡಿವಿಜಿ ಸುದ್ದಿ, ಹರಿಹರ : ತಾಲ್ಲೂಕಿನ ಹನಗವಾಡಿ ಗ್ರಾಮದಲ್ಲಿ ಗಂಭೀರ ಗಾಯದಿಂದ ತತ್ತರಿಸಿದ್ದ ಕೋತಿಗೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿ ಗ್ರಾಮದ ಯುವಕರು ಮಾನವೀಯತೆ ಮೆರೆದಿದ್ದಾರೆ.
ಗಂಭೀರ ಗಾಯದಿಂದ ನರುಳುತ್ತಿದ್ದ ಕೋತಿಯನ್ನು ಕಂಡ ಯುವಕರು, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ ಸಾಯುವ ಪರಿಸ್ಥಿತಿಯಲ್ಲಿದ್ದ ಕೋತಿಯನ್ನು ರಕ್ಷಣೆ ಮಾಡಿದ್ದಾರೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ ಅಥವಾ ಪರಿಸರವಾಗಲಿ ನಾವು ಅವುಗಳಿಗೆ ಒಳ್ಳೆಯದನ್ನು ಬಯಸಿದರೆ ಅವು ನಮಗೆ ಒಳ್ಳೆಯದನ್ನು ಮಾಡುತ್ತವೆ. ಮನುಷ್ಯರಿಗೆ ಆರೋಗ್ಯ ಕೆಟ್ಟರೆ ವೈದ್ಯರ ಬಳಿ ಹೋಗುತ್ತಾರೆ. ಪ್ರಾಣಿಗಳಿಗೆ ತೊಂದರೆಯಾದರೆ ಎಲ್ಲಿ ಹೋಗಬೇಕು. ಆದಕಾರಣ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾದರೆ ಅವುಗಳಿಗೆ ಸ್ಪಂದಿಸುವ ಗುಣಗಳನ್ನು ಪ್ರತಿಯೊಬ್ಬರ ತಿಳಿದುಕೊಳ್ಳಬೇಕು ಎಂದರು.
ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಹನಗವಾಡಿ ಗ್ರಾಮದ ಆಟೋ ಕೆಂಚಪ್ಪ ಅವರ ಮನೆಯ ಮೇಲೆ ಕೋತಿ ಬಂದು ಕುಳಿತಾಗ, ಅದರ ಮೇಲೆ ಗಂಭೀರ ಗಾಯಗಳು ಕಂಡು ಬಂದಿದೆ. ಯುವಕರು ಅದನ್ನು ಹಿಡಿದು ಮಂಗಳವಾರ ಪಶು ಆರೋಗ್ಯ ಕೇಂದ್ರದಲ್ಲಿ ವೈದ್ಯರಾದ ಆರಾಧ್ಯ ಅವರು ಮತ್ತು ಯುವಕರು ಚಿಕಿತ್ಸೆ ನೀಡಿಸಿದ್ದಾರೆ.
ಗ್ರಾಮದ ಯುವಕರಾದ ಬರಮಪ್ಪ, ಕುಮಾರ್, ಕೆಂಚಪ್ಪ, ಮಂಜು, ಬಸವರಾಜ್, ಬಿ.ಜೆ ಬಸವನಗೌಡ, ಅರುಣ್ ಕೂನಾರ್, ವೆಂಕಟೇಶ್, ಚಮನ್, ನಾಗರಾಜ್, ಸಂಜು, ಉಮೇಶ್,ಹಾಲಸ್ವಾಮಿ, ಲಿಂಗರಾಜ್, ಮಾರುತಿ ಹಾಗೂ ಅನೇಕರು ಕೋತಿ ರಕ್ಷಣೆಯಲ್ಲಿ ತೊಡಗಿದವರಾಗಿದ್ದಾರೆ



