ಡಿವಿಜಿ ಸುದ್ದಿ, ದಾವಣಗೆರೆ; ಜಿಲ್ಲೆಯಲ್ಲಿ ಬೇಸಿಗೆ ಹಂಗಾಮಿನ ಭತ್ತದ ಕಟಾವಿಗೆ ಬಂದಿದ್ದು, ಕಟಾವು ಯಂತ್ರಗಳ ಮಾಲೀಕರು ಗಂಟೆಗೆ 3 ಸಾವಿರದಿಂದ 3,500 ದರ ವಸೂಲಿ ಮಾಡುವ ದೂರ ಬಂದಿದೆ. ಹೀಗಾಗಿ ಗಂಟೆಗೆ 1,800 ರೂಪಾಯಿಗಿಂತ ಹೆಚ್ಚು ವಸೂಲಿ ಮಾಡಿದರೆ ದಂಡ ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಮೂರು ವಾರಗಳಲ್ಲಿ ಭತ್ತದ ಬೆಳೆಯ ಕಟಾವು ಪ್ರಾರಂಭವಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ 54377 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯ ಕ್ಷೇತ್ರ ಆವರಿಸಿದೆ. ರೈತರು ಶೇ.95 ರಷ್ಟು ಭತ್ತದ ಬೆಳೆಯನ್ನು ಕಂಬೈನ್ಡ್ ಹಾರ್ವೇಸ್ಟರ್ಗಳ ಮೂಲಕ ಕಟಾವು ಮಾಡುತ್ತಿದ್ದು ಜಿಲ್ಲೆಯಲ್ಲಿರುವ ಕೃಷಿ ಯಂತ್ರಧಾರೆಗಳಲ್ಲಿ ಲಭ್ಯವಿರುವ ಭತ್ತ ಕಟಾವು ಯಂತ್ರದ ಪ್ರಯೋಜನವನ್ನು ರೈತರು ಪಡೆದುಕೊಳ್ಳಲು ತಿಳಿಸಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭತ್ತ ಕಟಾವು ಯಂತ್ರದ ಮಾಲೀಕರು ರೈತರಿಂದ ಪ್ರತಿ ಗಂಟೆಗೆ ರೂ. 3000 ರಿಂದ ರೂ. 3500 ಗಳವರೆಗೆ ಹಣ ನಿಗಧಿಪಡಿಸುತ್ತಿದ್ದಾರೆ ಎಂದು ಗಮನಕ್ಕೆ ಬಂದಿದ್ದು ಇದರಿಂದಾಗಿ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ.
ಕೋವಿಡ್-19 ಹಬ್ಬುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಪ್ರಸಕ್ತ ಬೇಸಿಗೆ ಹಂಗಾಮಿನ ಭತ್ತದ ಬೆಳೆಯ ಕಟಾವಿಗೆ ರೂ. 1,800 ಪ್ರತಿ ಗಂಟೆಗೆ ಮೀರದಂತೆ ಬೆಳೆಯನ್ನು ಕಟಾವು ಮಾಡಲು ಸೂಚಿಸಿದೆ. ತಪ್ಪಿದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ದ ವಿಪತ್ತು ನಿರ್ವಹಣೆ ಕಾಯ್ದೆ 2005 ರ (Dissaster Management Act-2005) ಪ್ರಕಾರ ಕಾನೂನು ಕ್ರಮ ಕೈಗೂಳ್ಳಲಾಗುವು ಎಂದು ಮಹಾಂತೇಶ ಬೀಳಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



