ಡಿವಿಜಿ ಸುದ್ದಿ.ಕಾಂ ಬೆಂಗಳೂರು: ಮಲೆನಾಡಿನ ಹೆಚ್ಚಿನ ಭಾಗದಲ್ಲಿರುವ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸರಿಯಾಗಿ ಸಿಗುತ್ತಿಲ್ಲ. ಈ ಕೂಡಲೇ ಖಾಸಗಿ ಕಂಪನಿಗಳು ಹೆಚ್ಚಿನ ಟವರ್ ಹಾಕಿ ನೆಟ್‌ವರ್ಕ್ ಸಮಸ್ಯೆ ಸರಿಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾಸಗಿ ಕಂಪನಿಗಳಿಗೆ ಸೂಚಿಸಿದರು.
ವಿಧಾನಸೌದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗು ಶಿವಮೊಗ್ಗ ಸಂಸದ ವೈ.ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು.
ಮಲೆನಾಡು ಭಾಗದಲ್ಲಿ ಹೆಚ್ಚಿನ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಇದ್ದು, ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದ ಬೆಂಗಳೂರಿನಿಂದ ರಜೆ ಸಂದರ್ಭದಲ್ಲಿ ಬರುವ ಯುವಕರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಸಂಸದ ರಾಘವೇಂದ್ರ ವಿಷಯ ಪ್ರಸ್ತಾಪಿಸಿದರು.
ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿಎಸ್‌ಎನ್‌ಎಲ್ ಜೊತೆ ಖಾಸಗಿ ಕಂಪನಿಗಳು ಜೊತೆಗೂಡಿ ಹೆಚ್ಚಿನ ಟವರ್‌ಗಳನ್ನು ನಿರ್ಮಾಣ ಮಾಡಬೇಕು. ಇದಕ್ಕೆ ಬೇಕಾದ ನೆರವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಸಭೆಯಲ್ಲಿ ತಗೆದುಕೊಂಡ ಇತರೆ ತೀರ್ಮಾನಗಳು
- ಶಿವಮೊಗ್ಗ ಹೈವೇ ಯೋಜನೆಗೆ ತೊಡಕಾಗಿರುವ ತುಮಕೂರು ಪಟ್ಟಣದ ಭೂ ಸ್ವಾದೀನ ಪ್ರಕ್ರಿಯೆಗೆ ಇದ್ದ ಸಮಸ್ಯೆ ನಿವಾರಣೆ
- ಹೈವೆ ಯಲ್ಲಿ ಹಾದು ಹೋಗುವ ಜಾಗದಲ್ಲಿರುವ ಕರೆಗಳನ್ನು ಹೂಳೆತ್ತಿ ಅದರ ಮಣ್ಣನ್ನು ರಸ್ತೆ ನಿರ್ಮಾಣ ಕ್ಕೆ ಬಳಸಿಕೊಳ್ಳಲು ತೀರ್ಮಾನ
- ಹೈವೇ ನಿರ್ಮಾಣ ಕಾಮಗಾರಿಗಳುನ್ನು ತ್ವರಿತವಾಗಿ ಮುಗಿಸಲು ಹೆಚ್ಚಿನ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಸೂಚನೆ
- ಸಿಗಂಧೂರು ಸೇತುವೆ 2.4 ಕಿಲೋಮೀಟರ್ ಉದ್ದ ಇದ್ದು ಈ ಸೇತುವೆಯನ್ನು ಪ್ರವಾಸಿ ತಾಣಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲು ಸೂಚನೆ
- ಶಿವಮೊಗ್ಗ ಸುತ್ತ ಉದ್ದೇಶಿಸಿರುವ 2 ಲೈನ್ ರಿಂಗ್ ರಸ್ತೆಗೆ ಸಂಬಂಧಿಸಿದಂತೆ ರೈಲ್ವೆ ಭೂಸ್ವಾಧೀನಕ್ಕೆ ಇದ್ದ ಸಮಸ್ಯೆ ಬಗೆಹರಿಸಲಾಯಿತು



