Connect with us

Dvg Suddi-Kannada News

ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್; ರಾಹುಲ್ ಶತಕ ವ್ಯರ್ಥ

ಪ್ರಮುಖ ಸುದ್ದಿ

ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್; ರಾಹುಲ್ ಶತಕ ವ್ಯರ್ಥ

ಮೌಂಟ್ ಮಾಂಗನೂಯಿ: ಟಿ20 ಕ್ರಿಕೆಟ್ ನಲ್ಲಿ ಭರ್ಜರಿ ಆಟವಾಡಿ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾಗೆ ಏಕದಿನ ಸರಣಿಯನ್ನು ನ್ಯೂಜಿಲೆಂಡ್‌  ಕ್ಲೀನ್‌ ಸ್ವೀಪ್‌ ಮೂಲಕ ತಿರುಗೇಟು ನೀಡಿದೆ. 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್  ಗೆಲ್ಲುವ ಮೂಲಕ 3-0 ಅಂತರದಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 296 ರನ್‌ ಗಳಿಸಿತ್ತು. ಈ ಸವಾಲಿನ ಗುರಿ ನೀಡಲು ಕನ್ನಡಿಗರಾದ  ಕೆ.ಎಲ್‌. ರಾಹುಲ್‌ 112, ಮನೀಷ್ ಪಾಂಡೆ 42  ಶ್ರೇಯಸ್‌ ಅಯ್ಯರ್‌ 62 ರನ್  ಕಲೆ ಹಾಕಿದ್ದರಿಂದ ಇಂಡಿಯಾ ಸವಾಲಿನ ಗುರಿ ನೀಡಿತು.

ಇಂಡಿಯ ನೀಡಿದ 296 ರನ್ ಗುರಿ  ಬೆನ್ನತ್ತಿದ ಕಿವೀಸ್‌ ಪಡೆಗೆ ಆರಂಭಿಕ ಆಟಗಾರರದ ಮಾರ್ಟಿನ್‌ ಗಪ್ಟಿಲ್‌ , ಹೆನ್ರಿ ನಿಕೋಲಸ್ ಉತ್ತಮ ಆರಂಭ ಒದಗಿಸಿ ಕೊಟ್ಟರು.  ಈ ಜೋಡಿ ಮೊದಲ ವಿಕೆಟ್‌ಗೆ 106 ರನ್‌ ಸೇರಿಸಿತು.  66 ರನ್‌ ಗಳಿಸಿ ಬಿರುಸಿನ ಬ್ಯಾಟಿಂಗ್‌ ಮಾಡುತ್ತಿದ್ದ ಗಪ್ಟಿಲ್‌ ನನ್ನು ಚಾಹಲ್‌ಗೆ  ಔಟ್ ಮಾಡುವ ಮೂಲಕ ಮೊದಲ ಬ್ರೇಕ್ ನೀಡಿದರು.

ಇದಾದ ನಂತರ ಬಂದ ನಾಯಕ ಕೇನ್‌ ವಿಲಿಯಮ್ಸನ್‌ 22 ರನ್‌, ರಾಸ್‌ ಟೇಲರ್‌ 12 ರನ್‌ ಗಳಿಸಿ ಔಟಾದರೂ, ತಾಳ್ಮೆಯ ಆಟ ಮುಂದುವರಿಸಿದ ಹೆನ್ರಿ 103 ಎಸೆತಗಳಲ್ಲಿ 80 ರನ್‌ ಗಳಿಸಿ ನ್ಯೂಜಿಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಕೊನೆಯಲ್ಲಿ  ಆಲ್ರೌಂಡರ್ ಕಾಲಿನ್‌ ಡಿ ಗ್ರಾಂಡ್‌ಹೋಮ್‌ ಬಿರುಸಿನ 58 ರನ್‌ ಸಿಡಿಸಿದರು. ಈ ಮೂಲಕ  47.1ನೇ ಓವರ್‌ನಲ್ಲಿ 300 ರನ್‌ ಕಲೆಹಾಕಿದ ಕಿವೀಸ್‌ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top