ಡಿವಿಜಿ ಸುದ್ದಿ.ಕಾಂ, ದಾವಣಗೆರೆ : ಸಾಮಾನ್ಯವಾಗಿ ಧರ್ಮದೇಟು ಬೀಳುವುದು ಕಳ್ಳರಿಗೆ. ಆದ್ರೆ, ಇಲ್ಲೊಂದು ವಿಶೇಷ ಘಟನೆ ನಡೆದಿದೆ. ಆತ ಹೇಳಿಕೊಳ್ಳಕೆ ಪೊಲೀಸ್. ಆತ ಮಾಡಿರೋ ಕೆಲಸ ಕೇಳಿದ್ರೆ ನೀವು ಕೂಡ ಒಂದು ಏಟು ಹಾಕತ್ತಿದ್ದರೆನೋ…
ಹೌದು, ಅಣೆಬರಹ ಸರಿ ಇಲ್ಲದಾಗ ಏನು ಆಗುತ್ತೋ ಯಾರಿಗೆ ಗೊತ್ತಾಗಲ್ಲ. ದಾವಣಗೆರೆ ಎಎಸ್ಐ ಆಗಿರುವ ಓಬಳೇಶ್ ಮಾಯಕೊಂಡ ಗಣೇಶ ವಿಸರ್ಜನೆ ಬಂದೋಬಸ್ತ್ ಗೆ ಹೋಗಿ, ತಾನೇ ಜನರಿಂದ ಧರ್ಮದೇಟು ತಿಂದಿದ್ದಾನೆ.
ಅನೈತಿಕ ಸಂಬಂಧದ ಆರೋಪ ಹಿನ್ನೆಲೆ ಎಎಸ್ಐ ಗೆ ಗ್ರಾಮಸ್ಥರಿಂದ ಧರ್ಮದೇಟು ಕೊಟ್ಟಿದ್ದಾರೆ. ಈತ ಮೊದಲು ಮಾಯಕೊಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಆದರೀಗ ದಾವಣಗೆರೆಯಲ್ಲಿ ಎಎಸ್ಐ ಆಗಿರುವ ಓಬಳೇಶ್, ಗಣೇಶ ವಿಸರ್ಜನೆ ಬಂದೋಬಸ್ತ್ ಹೋಗಿದ್ದಾಗ ಮತ್ತೆ ತನ್ನ ಹಳೆಯ ಚಾಳಿ ತೋರಿಸಲು ಹೋದಾಗ ಸ್ಥಳೀಯರು ಹಿಗ್ಗಾಮುಗ್ಗಾ ತಳಿಸಿ, ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಗಲಾಟೆ ಜೋರು ಆಗುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಯ ಆಗಮಿಸಿ ಗಲಾಟೆ ತಿಳಿಗೊಳಿಸಿದರು. ಥಳಿತಕ್ಕೆ ಒಳಗಾದ ಎಎಸ್ ಐ ಓಬಳೇಶ್ ನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.