ಡಿವಿಜಿಸುದ್ದಿ.ಕಾಂ, ದಾವಣಗೆರೆ: ಬಸವಾದಿ ಶರಣರ ವಚನ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಮೈಲುಗಲ್ಲು. ಜೀವನ ಮೌಲ್ಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯವನ್ನು ಮಕ್ಕಳ ವಚನ ಅಧ್ಯಾಯನ ಮಾಡುವ ಮೂಲಕ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಬಸವ ಸಮಿತಿಯ ಆಧ್ಯಕ್ಷ ಅರವಿಂದ್ ಜತ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶರಣ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಮತ್ತು ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ `ವಚನ ಮತ್ತು ವ್ಯಕ್ತಿತ್ವ’ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹವೇ ಒಂದು ದೇಗುಲವಿದ್ದಂತೆ. ದೇವರನ್ನು ಹುಡುಕಿಕೊಂಡು ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ದೇಹವನ್ನೇ ದೇವಾಲಯ ಮಾಡಿಕೊಂಡು. ನಿಮ್ಮ ಆತ್ಮ ಶುದ್ಧಿಕರಣ ಮಾಡಿಕೊಳ್ಳಿ. ನಿಮ್ಮ ಒಳಗಿರುವ ಆತ್ಮ ಶುದ್ಧಿಯಾದರೆ ನಿಮ್ಮ ವ್ಯಕ್ತಿತ್ವ ತಾನಾಗಿಯೇ ವಿಕಾಸವಾಗಲಿದೆ ಎಂದರು.

ಬಸವಣ್ಣ, ಅಕ್ಕಮದೇವಿ, ಅಲ್ಲಮ ಪ್ರಭು ಸೇರಿದಂತೆ ಅನೇಕ ಶರಣರು ಸರಳ ಕನ್ನಡದಲ್ಲಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಈ ವನಗಳ ಸಾರವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಾಯನ ಮಾಡುವ ಮೂಲಕ ನಿಮ್ಮ ಆತ್ಮಥೈರ್ಯ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.

ಈ ಸಂವಾದ ಅಧ್ಯಕ್ಷತೆಯನ್ನು ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರ ವಹಿಸಿದ್ದರು. ಪ್ರೌಢಶಾಲೆ, ಸಿ.ಬಿ.ಎಸ್.ಇ ಶಾಲಾ ಮಕ್ಕಳು ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿ ವರ್ಗದ ವರು ಪಾಲ್ಗೊಂಡಿದ್ದರು.



