ದಾವಣಗೆರೆ: ನನಗೆ ಯಾರಿಂದಲೂ, ಯಾವುದೇ ನೋಟಿಸ್ ಬಂದಿಲ್ಲ. ಯಾವ ಕೆಂಪಣ್ಣನೂ ಪರಿಚಯವಿಲ್ಲ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಮಹಾ ಸಭಾವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮಹಾ ಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹಾಗೂ ಎನ್ ತಿಪ್ಪಣ್ಣ ಅವರನ್ನು ಪದಚ್ಯುತಿಗೊಳಿಸಬೇಕು ಹಾಗೂ ಲಿಂಗಾಯತ ಪದ ಬಳಕೆಗೆ ತಡೆ ನೀಡಬೇಕು ಎಂದು ಎಸ್.ಎನ್. ಕೆಂಪಣ್ಣ ಸೇರಿ ಐವರು ದಾವೆ ಹೂಡಿದದರು. ಇದಕ್ಕೆ ಬೆಂಗಳೂರಿ ಸೆಷನ್ಸ್ ಕೋರ್ಟ್ ತುರ್ತು ನೋಟಿಸ್ ನೀಡಿತ್ತು. ಇದಕ್ಕೆಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಈ ಹಿಂದೆ ಅಖಿಲ ಭಾರತ ವೀರಶೈವ ಮಹಾ ಸಭಾ ಎಂದು ಇತ್ತು. ಅದನ್ನು ಸಮಾಜ ಒಳಿತಿಗಾಗಿ ಎಲ್ಲರೂ ಒಟ್ಟಾಗಿ ಹೋಗಬೇಕು ಎನ್ನುವ ಉದ್ದೇಶದಿಂದ 2020 ರಲ್ಲಿ ಲಿಂಗಾಯತ ಪದ ಸೇರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಇದಕ್ಕೆ ಕೆಲವರು ಪ್ರಚಾರಕ್ಕಾಗಿ ಏನೇನೋ ಹೇಳುತ್ತಿದ್ದಾರೆ. ಮಹಾ ಸಭಾ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ, ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ಪಕ್ಷದ ನಾಯಕರು ಇದ್ದಾರೆ ಎಂದರು.
ಲಿಂಗಾಯತ ಮಹಾ ಸಭಾ ಮಾಡಿಕೊಂಡಿರುವ ಜಾಮದಾರ್ ಈ ಮೊದಲು ಎಲ್ಲಿದ್ದರು. ಸಮಾಜಕ್ಕೆ ಅವರ ಕೊಡುಗೆ ಏನು ..? ಬೆಂಗಳೂರಲ್ಲಿ ನಾವು ಜಮೀನು ಖರೀದಿಸಿಲ್ಲ. ಅದು ಬಾಪೂಜಿ ಆಸ್ಪತ್ರೆಗೆ ಬಿಡಿಎ ನೀಡಿದೆ. ಇಲ್ಲಿವರೆಗೆ ಮಾತನಾಡದವರು ಹೀಗೆ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ನಮ್ಮ ಮನೆಯಿಂದ ಹೆಣ್ಣು ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸೊಸೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದರು.



