ಬೆಂಗಳೂರು: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸೀನಿಯರ್ ರೆಸಿಡೆಂಟ್ ಹುದ್ದೆಗಳ ಭರ್ತಿಗೆ ಡಿ.7ರಂದು ಸಂದರ್ಶನ ನಡೆಯಲಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.
ಬೆಳಗ್ಗೆ 9.30ರಿಂದ 10.30ರವರೆಗೆ ಸಂದರ್ಶನಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ನಡೆಯಲಿದೆ. ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಮುಖ್ಯವಾಗಿ ಎಮರ್ಜೆನ್ಸಿ ಮೆಡಿಸಿನ್ನಲ್ಲಿ ಡಿಎನ್ಬಿ, ಪಿಜಿ ಡಿಪ್ಲೊಮಾ. ಜನರಲ್ ಸರ್ಜರಿಯಲ್ಲಿ ಎಂಎಸ್, ಅನಸ್ತೇಶಿಯಾ, ರೆಸ್ಪಿರೇಟರಿ ಮೆಡಿಸಿನ್ನಲ್ಲಿ ಎಂಡಿ ಪೂರ್ಣಗೊಳಿಸಿರಬೇಕು. ಎಮರ್ಜೆನ್ಸಿ ಮೆಡಿಸಿನ್ನಲ್ಲಿ ಎಂಡಿ, ಆರ್ಥೋಪೆಡಿಕ್ಸ್ನಲ್ಲಿ ಎಂಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಸರ್ಕಾರದ ನಿಯಮದ ಪ್ರಕಾರ ವಯೋಸಡಿಲಿಕೆ ಇರುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋ ಸಡಿಲಿಕೆ ಇದೆ. ಆದರೆ ಗರಿಷ್ಠ 45 ವರ್ಷ ವಯೋಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.ಪ್ರತಿ ಮಾಸಿಕ 67,700 ರೂ. ವೇತನ ನಿಗದಿ ಪಡಿಸಲಾಗಿದ್ದು, ಇತರ ಭತ್ಯೆಗಳು ಸಹ ಇರಲಿವೆ.
ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಂದರ್ಶನದ ವೇಳೆ ಎಸ್ಎಸ್ಎಲ್ಸಿ ಪ್ರಮಾಣಪತ್ರ, ಶೈಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರ, ಜಾತಿ ಮತ್ತು ಮೀಸಲಾತಿ ಪ್ರಮಾಣ ಪತ್ರ ಅವಶ್ಯಕವಾಗಿವೆ. ಆದರೆ ಯಾವುದೇ ಟಿಎ, ಡಿಎ ಸೌಲಭ್ಯ ಇರುವುದಿಲ್ಲ. ಈಗಾಗಲೇ ಸೀನಿಯರ್ ರೆಸಿಡೆನ್ಸಿ ಸ್ಕೀಂನಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸುವವರಿಗೆ ಸಂದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಒಂದು ವರ್ಷ ಗುತ್ತಿಗೆ ಆಧಾರದ ಮೇಲೆ ಸೀನಿಯರ್ ರೆಸಿಡೆಂಟ್ ಆಗಿ ಕೆಲಸ ನಿರ್ವಹಿಸಿದವರಿಗೆ ಇಲ್ಲಿ ಎರಡು ವರ್ಷ ಕೆಲಸ ಮಾಡಲು ಅವಕಾಶವಿರುತ್ತದೆ.
ಅಧಿಸೂಚನೆಯಲ್ಲಿ ತಿಳಿಸಿರುವ ಸಮಯ ಮತ್ತು ಸ್ಥಳಕ್ಕೆ ಅಭ್ಯರ್ಥಿಗಳು ಹಾಜರಾಗತಕ್ಕದ್ದು, ತಡವಾಗಿ ಬಂದವರನ್ನು ಅನರ್ಹಗೊಳಿಸಲಾಗುವುದು. ಅಭ್ಯರ್ಥಿಗಳು ಅರ್ಜಿಯನ್ನು ESIC ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು, ಎಲ್ಲ ಮೂಲ ದಾಖಲೆ ಹಾಜರುಪಡಿಸಬೇಕು. ಸ್ಥಳ: ಅಕಾಡೆಮಿಕ್ ಬ್ಲಾಕ್, ಇಎಸ್ಐಸಿ ಮೆಡಿಕಲ್ ಕಾಲೇಜು, PGIMSR, ರಾಜಾಜಿನಗರ, ಬೆಂಗಳೂರು& 560 010. ಸಂದರ್ಶನ ನಡೆಯುವ ದಿನ: 7.12.2022
ಮಾಹಿತಿಗೆ: www.esic.nic.in ವೆಬ್ ಸೈಟ್ ಗೆ ಭೇಟಿ ನೀಡಿ.



