ದಾವಣಗೆರೆ: ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ತಲಾ 3, ನಂಬರ್ ಪ್ಲೇಟ್ ಗುರುತಿಸುವ ಸ್ವಯಂ ಚಾಲಿತ ಕ್ಯಾಮೆರಾ (Automatic Number Plate Recognition Camera)ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಹೆದ್ದಾರಿಗಳಲ್ಲಿ ಪಥ ಶಿಸ್ತು (lane discipline)) ಉಲ್ಲಂಘಿಸಿದ್ರೆ 500 ರೂ. ದಂಡ ವಿಧಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಫೆ.20 ರಿಂದಲೇ ಸಂಜೆಯಿಂದಲೇ ದಂಡ ವಿಧಿಸಲಾಗುವುದು ಎಂದು ಎಸ್ ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದರೆ ಆ ವಾಹನಗಳ ನಂಬರ್, ಸ್ಥಳ, ಸಮಯ, ಜಿಪಿಎಸ್ ಲೊಕೇಷನ್ , ಫೋಟೋ ಟೋಲ್‌ಗಳಿಗೆ ಸಂದೇಶ ರವಾನೆಯಾಗುತ್ತದೆ. ಟೋಲ್ ಗೇಟ್‌ಗಳಲ್ಲಿ ವಾಹನಗಳು ನಿಂತಾಗ ಅಲ್ಲಿ ದಂಡ ವಿಧಿಸಲಾಗುವುದು. ಒಂದು ಟೋಲ್ ಗೇಟ್‌ನಲ್ಲಿ ತಪ್ಪಿಸಿಕೊಂಡರೆ ಮತ್ತೊಂದು ಟೋಲ್‌ಗೇಟ್‌ನಲ್ಲಿ ದಂಡ ವಿಧಿಸುವುದು ಫಿಕ್ಸ್ ಎಂದರು.
ಹೆದ್ದಾರಿಯಲ್ಲಿ ಕಾರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಮೀಸಲಾದ ಪಥದಲ್ಲಿ ಭಾರಿ ವಾಹನಗಳು ಸಂಚರಿಸುತ್ತಿವೆ. ಇದರಿಂದ ಕಾರು ಮತ್ತಿತರ ವಾಹನಗಳ ಸವಾರರು ವೇಗದಲ್ಲಿ ಬೇರೆ ಬೇರೆ ಪಥಗಳಲ್ಲಿ ಹೋಗಿ ಅಪಘಾತಗಳು ಸಂಭವಿಸುತ್ತವೆ. ಇಂತಹ ಅಪಘಾತ ಕಡಿಮೆ ಮಾಡಲು ಪಥ ಶಿಸ್ತು ಕಾಪಾಡಬೇಕಿದೆ ಎಂದರು.
- ಎಲ್ಲಿ ಸಂಚರಿಸಬೇಕು..?
- ಹೆದ್ದಾರಿಯಲ್ಲಿ ನಾಲ್ಕು ಚಕ್ರದ ವಾಹನಗಳು ಮೊದಲ ಪಥ (ಇನ್ನರ್ ಲೇನ್)
- ಭಾರಿ ವಾಹನಗಳು ಲಾರಿ, ಬಸ್, ಟ್ರಕ್, ಟ್ಯಾಂಕರ್‌ಗಳು ಸೆಕೆಂಡ್ ಲೇನ್, ಹೊರ ಪಥ, (ಔಟರ್ ಲೇನ್)ದಲ್ಲಿ ಸಂಚರಿಸಬೇಕು
- ಈ ಶಿಸ್ತು ಉಲ್ಲಂಘಿಸಿದರೆ 500 ದಂಡ



