ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) 66ನೇ ರಾಷ್ಟ್ರೀಯ ಅಧಿವೇಶನದ ಪೋಸ್ಟರ್ ಬಿಡುಗಡೆ ನಗರದ ವಿವಿಧ ಕಾಲೇಜುಗಗಳಲ್ಲಿ ಬಿಡುಗಡೆ ಮಾಡಲಾಯಿತು. ಡಿ. 25, 26 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಎಬಿವಿಪಿ 66ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ವಿಟಿಯು ನ ಉಪ ಕುಲಪತಿ ಡಾ.ಕರಿಸಿದ್ದಪ್ಪ ಸಮ್ಮೇಳನ ಪೋಸ್ಟರ್ ಬಿಡುಗಡೆಗೊಳಿಸಿದರು. ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜ್, ಎ.ವಿ.ಕೆ ಮತ್ತು ಎಂ.ಎಸ್.ಬಿ ಕಾಲೇಜಿನಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯು.ಬಿ.ಡಿ.ಟಿ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಹೋಳಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಡಾ.ಡಿ.ಎಸ್ ಪ್ರಕಾಶ್, ಯುವಿಸಿಇ ಪ್ರಾಂಶುಪಾಲ ಪ್ರೊ. ರಮೇಶ್, ದಾವಣಗೆರೆ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಎಬಿವಿಪಿ ದಾವಣಗೆರೆ ನಗರಾಧ್ಯಕ್ಷ ಪವನ್ ರೇವಣಕರ್, ವಿಸ್ತಾರಕಿ ಭವ್ಯಶ್ರೀ, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖ್ ಆಕಾಶ್ ಇಟಗಿ, ನಗರ ಸಹ ಕಾರ್ಯದರ್ಶಿ ಕೊಟ್ರೇಶ್, ಕಾರ್ಯಕರ್ತ ದರ್ಶನ್, ಸುಮನ್,ವಿಜಯ್, ಮಾನಸ ಮತ್ತಿತರರು ಇದ್ದರು.




