ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸಿದ್ದು, ನೋಂದಾಯಿತ ರೈತರು – ಸಹಕಾರಿ ಸಂಘದ ಸದದ್ಯರಿಗೆ ಪ್ರತಿ ಕುಟುಂಕ್ಕೆ ಗರಿಷ್ಠ 5 ಲಕ್ಷ ವರಗೆ ಚಿಕಿತ್ಸೆ ಸೌಲಭ್ಯ ಪಡೆಯಬಹುದಾಗಿದೆ. ಈ ಆರೋಗ್ಯ ಯೋಜನೆಗೆ ನೋಂದಣಿ ಕಾರ್ಯ ನಡೆಯುತ್ತಿದ್ದು, ಇಂದೇ ಕೊನೆ ದಿನವಾಗಿದೆ. ಈ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಲು ಈ ಹಿಂದೆ ಅವಧಿ ಪೂರ್ಣಗೊಂಡಿತ್ತಾದರೂ ಬಳಿಕ ಇದನ್ನು ಮುಂದೂಡುವಂತೆ ಕೋರಿಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಪರಿಗಣಿಸಿ ಫೆಬ್ರವರಿ 28 ರ ವರೆಗೆ ರೈತರು, ಸಹಕಾರಿಗಳು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಾಲ್ಕು ಜನರ ಕುಟುಂಬಕ್ಕೆ ಗ್ರಾಮೀಣ ಪ್ರದೇಶದಲ್ಲಿ 500 ರೂಪಾಯಿ, ನಗರ ಪ್ರದೇಶದಲ್ಲಿ 1000 ರೂಪಾಯಿ ನಿಗದಿಪಡಿಸಲಾಗಿದ್ದು, ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದಲ್ಲಿ ತಲಾ ಒಬ್ಬರಿಗೆ 200 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ನೋಂದಣಿ ಮಾಡಿಸಿಕೊಂಡವರಿಗೆ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೆ ನಗದುರಹಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಇನ್ನೂ ನೋಂದಣಿ ಮಾಡಿಸಿಕೊಳ್ಳದವರು ಫೆಬ್ರವರಿ 28 ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಕೋರಲಾಗಿದೆ.