ವಿಜಯನಗರ: ಅಂಬಲಿ ಹಳಸೀತು, ಕಂಬಳಿ ಬೀಸೀತಲೇ ಪರಾಕ್ ಎಂದು ವರ್ಷದ ಕಾರ್ಣಿಕ ಭವಿಷ್ಯ ನುಡಿದಿದೆ. ಈ ಬಾರಿಯೂ ಉತ್ತಮ ಮಳೆ-ಬೆಳೆ ಮುನ್ಸೂಚನೆ ನೀಡಿದೆ.
ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಸುಕ್ಷೇತ್ರ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಜರುಗಿತು.14 ಅಡಿ ಎತ್ತರದ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ, ಅಂಬಲಿ ಹಳಸೀತು, ಕಂಬಳಿ ಬೀಸೀತಲೇ ಪರಾಕ್ ಎಂದು ನುಡಿದರು.
ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಮಳೆ ಬೆಳೆ ಜಾಸ್ತಿ ಆಗಲಿದೆ, ರೈತರಿಗೆ ಒಳ್ಳೆಯದಾಗುತ್ತದೆ. ಇದರ ಜತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂದು ಗೊರವಯ್ಯ ನುಡಿದ ಕಾರ್ಣಿಕದ ಮಾತನ್ನು ರೈತಾಪಿ ವರ್ಗದ ಮೇಲೆ ವಿಶ್ಲೇಷಿಸಿದ್ದಾರೆ. ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂದು ಗೊರವಯ್ಯ ನುಡಿದ ಕಾರ್ಣಿಕದ ನುಡಿಯಾಗಿದೆ ಎಂದರು.
11 ದಿನ ಉಪವಾಸ ವೃತ ಆಚರಣೆ ನಂತರ ಇಂದು ಕಾರ್ಣಿಕೋತ್ಸವ ನಡೆದಿದೆ. ಪ್ರತಿ ವರ್ಷವೂ ಮೈಲಾರ ಕ್ಷೇತ್ರದಲ್ಲಿ ನಡೆಯಲಿದ್ದು, ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ನಡೆಯುತ್ತಿದೆ.