ದಾವಣಗೆರೆ: ವಿಜಯ ನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ಮಹೋತ್ಸವವು ಫೆ.07 ರಂದು ವಿಜೃಂಭಣೆಯಿಂದ ಜರುಗಲಿದೆ.
ಜ.28 ರಂದು ರಥಸಪ್ತಮಿ, ಕಡುಬಿನ ಕಾಳಗ ನಡೆಯುವುದು. ಫೆ.05 ರಂದು ಭರತ ಹುಣ್ಣಿಮೆ, ಧ್ವಜಾರೋಹಣ. ಫೆ.06 ರಂದು ತ್ರಿಶೂಲಪೂಜೆ. ಫೆ. 07 ರಂದು ಶ್ರೀಸ್ವಾಮಿಯ ಮಲ್ಲಾಸುರನ ಸಂಹಾರಕ್ಕೆ ಡೆಂಕನ ಮರಡಿಗೆ ಗುಪ್ತಮೌನ ಸವಾರಿ. ಸಂಜೆ 5-30 ಕ್ಕೆ ಶ್ರೀಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ಗುರುಪರಂಪರ್ಯ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಗೊರವಯ್ಯನವರಿಂದ ಕಾರ್ಣಿಕ ನುಡಿಯುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



