Connect with us

Dvgsuddi Kannada | online news portal | Kannada news online

ಹೊಸಪೇಟೆ; ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು

ಪ್ರಮುಖ ಸುದ್ದಿ

ಹೊಸಪೇಟೆ; ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು

ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟಗೊಂಡಿದೆ. ಇದರ ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ.

ಮನೆಯಲ್ಲಿ ಮಲಗಿದ್ದ ಡಿ. ವೆಂಕಟ್ ಪ್ರಶಾಂತ್ (42), ಅವರ ಪತ್ನಿ ಡಿ. ಚಂದ್ರಕಲಾ (38), ಮಕ್ಕಳಾದ ಎಚ್.ಎ. ಅರ್ದ್ವಿಕ್ (16), ಪ್ರೇರಣಾ (8) ಸಾವನ್ನಪ್ಪಿದ್ದಾರೆ.

ಮರಿಯಮ್ಮನಹಳ್ಳಿಯ ಐದನೇ ವಾರ್ಡಿನ ರಾಘವೇಂದ್ರ ಶೆಟ್ಟಿ ಅವರ ಮನೆಯಲ್ಲಿ ಗುರುವಾರ ತಡರಾತ್ರಿವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಬಳಿಕ ಎಸಿ ಸ್ಫೋಟಗೊಂಡಿದೆ. ಮನೆಯ ಕೆಳಭಾಗದಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ, ಅವರ ಪತ್ನಿ ರಾಜೇಶ್ವರಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ, ಮೊದಲ ಮಹಡಿಯ‌ ಮನೆಯಲ್ಲಿದ್ದ ವೆಂಕಟ್ ಪ್ರಶಾಂತ್, ಚಂದ್ರಕಲಾ, ಅರ್ದ್ವಿಕ್ ಹಾಗೂ ಪ್ರೇರಣಾ ಹೊರಗೆ ಬರಲಾಗದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top