Connect with us

Dvgsuddi Kannada | online news portal | Kannada news online

ತರಳಬಾಳು ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 38 ಸಹಾಯಕ ಪ್ರಾಧ್ಯಾಪಕ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿಗೆ ಅರ್ಜಿ ಆಹ್ವಾನ; ಯುಜಿಸಿ‌ ವೇತನ ಶ್ರೇಣಿ

ಪ್ರಮುಖ ಸುದ್ದಿ

ತರಳಬಾಳು ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 38 ಸಹಾಯಕ ಪ್ರಾಧ್ಯಾಪಕ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿಗೆ ಅರ್ಜಿ ಆಹ್ವಾನ; ಯುಜಿಸಿ‌ ವೇತನ ಶ್ರೇಣಿ

ದಾವಣಗೆರೆ; ಚಿತ್ರದುರ್ಗ ಜಿಲ್ಲೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ.) ಸಿರಿಗೆರೆ ಆಶ್ರಯದಲ್ಲಿ ನಡೆಯುತ್ತಿರುವ 5 ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 38 ಅನುದಾನಿತ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ.

ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ: ಕಾಶಿಇ/287/ಖಾಹುಭ/ಶಿವಿ/2018-19/ನೇವಿ-2 ದಿನಾಂಕ 21.3.2023 ಹಾಗೂ ಮಾನ್ಯ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಛೇರಿ, ಶಿವಮೊಗ್ಗ ಇವರ ಪತ್ರ ಸಂಖ್ಯೆ: ಪ್ರಾಕಶಿ/ಕಾಶಿಇ/262/ಖಾಹುಭ/ಎಸ್.ಟಿ.ಜೆ/2022-23 ದಿನಾಂಕ 23.2.2023 |ರ ಪ್ರಕಾರ ಅನುಮತಿಸಿದ ಮೇರೆಗೆ, ಈ ಕೆಳಕಂಡ ಸಹಾಯಕ ಪ್ರಾಧ್ಯಾಪಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರ
ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  • ಹುದ್ದೆಗಳ ವಿವರ
  • ಕನ್ನಡ , ಹುದ್ದೆ ಸಂಖ್ಯೆ-8
  • ಇಂಗ್ಲಿಷ್ ಹುದ್ದೆ ಸಂಖ್ಯೆ-3
  • ಇತಿಹಾಸ , ಹುದ್ದೆ ಸಂಖ್ಯೆ-4
  • ಅರ್ಥಶಾಸ್ತ್ರ, ಹುದ್ದೆ ಸಂಖ್ಯೆ-3
  • ರಾಜ್ಯಶಾಸ್ತ್ರ, ಹುದ್ದೆ ಸಂಖ್ಯೆ-1
  • ವಾಣಿಜ್ಯಶಾಸ್ತ್ರ, ಹುದ್ದೆ ಸಂಖ್ಯೆ- 12
  • ಪ್ರಾಣಿಶಾಸ್ತ್ರ, ಹುದ್ದೆ ಸಂಖ್ಯೆ- 1
  • ರಸಾಯನಶಾಸ್ತ್ರ, ಹುದ್ದೆ ಸಂಖ್ಯೆ- 1
  • ದೈಹಿಕ ಶಿಕ್ಷಣ ನಿರ್ದೇಶಕರು, ಹುದ್ದೆ ಸಂಖ್ಯೆ-2
  • ಗ್ರಂಥಪಾಲಕರು,ಹುದ್ದೆ ಸಂಖ್ಯೆ-3

 

1. ವಿದ್ಯಾರ್ಹತೆ : ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡ 55, ಪ.ಜಾ, ಮತ್ತು ಪ.ಪಂ.ಅಭ್ಯರ್ಥಿಗಳಿಗೆ ಶೇಕಡ 50 ರಷ್ಟು ಅಂಕಗಳನ್ನು ಪಡೆದಿರಬೇಕು. NET I SLET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೋರ್ಸ್ ವರ್ಕನೊಂದಿಗೆ ಪಿಹೆಚ್.ಡಿ. ಪದವಿ ಪಡೆದಿರುವ ಅಭ್ಯರ್ಥಿಗಳಿಗೆ NET I SLET ಪರೀಕ್ಷೆಯಿಂದ ವಿನಾಯಿತಿ ಇರುತ್ತದೆ. ದಿನಾಂಕ‌ 11.7.2009ರ ಪೂರ್ವದಲ್ಲಿ ಪಿಹೆಚ್.ಡಿ. ಪದವಿ ಪಡೆದಿದ್ದಲ್ಲಿ / ಪಿಹೆಚ್.ಡಿ. ಪದವಿಗೆ ನೋಂದಣಿ ಮಾಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ದಿನಾಂಕ 4.5.2016ರ ಯು.ಜಿ.ಸಿ. ಅಧಿಸೂಚನೆಯಲ್ಲಿ ಹೊರಡಿಸಿರುವ ನಿಯಮಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟಿರುತ್ತಾರೆ.

2. ವಯೋಮಿತಿ : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು
(ದಿ.20.6.2018ರ ಸರ್ಕಾರಿ ಆದೇಶ ಸಂಖ್ಯೆ: ಇಡಿ/49/ಯುಪಿಸಿ/2018ರ ಪ್ರಕಾರ ಪ.ಜಾ., ಪ.ಪಂ. ಮತ್ತು ಪ್ರವರ್ಗ-1ರ ಅಭ್ಯರ್ಥಿಗಳುಗರಿಷ್ಠ 45, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 43, ಸಾಮಾನ್ಯ ಅಭ್ಯರ್ಥಿಗಳು ಗರಿಷ್ಠ 40 ವರ್ಷಗಳು), ದಿ.13.12.2018ರ
ಸರ್ಕಾರಿ ಆದೇಶ ಸಂಖ್ಯೆ: ಇಡಿ/87/ಯುಪಿಸಿ/2016ರ ಸೇರ್ಪಡೆ ಆದೇಶದನ್ವಯ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ
ಪೂರ್ಣಕಾಲಿಕ ಬೋಧನಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೇಲಿನಂತೆ ಗರಿಷ್ಠ ವಯೋಮಿತಿ ನಿಗದಿಪಡಿಸಿರುವುದರೊಂದಿಗೆ
ಅವರು ಬೋಧನಾ ಅನುಭವ ಹೊಂದಿರುವ ಸೇವಾವಧಿ ಅಥವಾ 5 ವರ್ಷಗಳು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು
ಅವಧಿಯನ್ನು ಗರಿಷ್ಠ ವಯೋಮಿತಿಯಲ್ಲಿ ವಿನಾಯಿತಿ ಪಡೆಯಬಹುದು.

3. ವೇತನ, ವೇತನ ಶ್ರೇಣಿ / ಭತ್ಯೆಗಳು ಮತ್ತು ಇತರೆ ನಿಬಂಧನೆಗಳು ಯು.ಜಿ.ಸಿ. ಮತ್ತು ಕರ್ನಾಟಕ ಸರ್ಕಾರದ ನಿಯಮಗಳನ್ವಯ
ಇರುತ್ತವೆ.

4. ಸದರಿ ಖಾಲಿ ಹುದ್ದೆಗಳ ಭರ್ತಿಗೆ ನೀಡಿರುವ ಅನುಮತಿಯನ್ನು ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಹಂತದಲ್ಲಾದರೂರದ್ದುಪಡಿಸುವ ಅಧಿಕಾರವನ್ನು ಇಲಾಖೆ ಅಥವಾ ಸರ್ಕಾರ ಹೊಂದಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಅಥವಾ ಸಂದರ್ಶನಕ್ಕೆ
ಹಾಜರಾದ ಮಾತ್ರಕ್ಕೆ ಸದರಿ ಹುದ್ದೆಗಳ ಅಭ್ಯರ್ಥಿಗಳು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ.

5. ಅರ್ಜಿ ಸಲ್ಲಿಸುವ ವಿಧಾನ : ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಮ್ಮ ಸಂಸ್ಥೆಯ ವೆಬ್‌ಸೈಟ್ www.taralabalu.in ನಿಂದಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅದರ ಜೊತೆಗೆ ಅವಶ್ಯ ದೃಢೀಕೃತ ಪ್ರಮಾಣಪತ್ರಗಳೊಂದಿಗೆ ತಮ್ಮ ಅರ್ಜಿಯನ್ನು ಪ್ರಕಟಣೆ ಹೊರಡಿಸಿರುವ 21 ದಿನಗಳೊಳಗಾಗಿ ಆಡಳಿತಾಧಿಕಾರಿಗಳು, ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ), ಸಿರಿಗೆರೆ – 577541, ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ” ಈ ವಿಳಾಸಕ್ಕೆ ನೋಂದಣಿ ಅಂಚೆ ಮೂಲಕ ತಲುಪುವಂತೆ ಕಳುಹಿಸುವುದು. ಇದರೊಂದಿಗೆ
ಪ.ಜಾ., ಪ.ಪಂ. ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು ರೂ.1,000/- ಮತ್ತು ಇತರ ಅಭ್ಯರ್ಥಿಗಳು ರೂ.2,000/- ಗಳ ಬ್ಯಾಂಕ್
ಡಿ.ಡಿ.ಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಡಿ.ಡಿ.ಯನ್ನು “Administrative Officer, S.T.J. Education Society, Sirigere,
Chitradurga Dist” ಈ ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದುಕೊಂಡಿರಬೇಕು.

6. ಈಗಾಗಲೇ ಸರ್ಕಾರಿ / ಅನುದಾನಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಲಗತ್ತಿಸಬೇಕು.

7, ಸಂದರ್ಶನಕ್ಕೆ ಆಹ್ವಾನ ಪಡೆದ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಸಂದರ್ಶನದದಿನಾಂಕ ಮತ್ತು ಸ್ಥಳವನ್ನು ನಂತರ ತಿಳಿಸಲಾಗುವುದು.

8.ಡಿ.ಡಿ. ಇಲ್ಲದ, ಅಪೂರ್ಣ ಮಾಹಿತಿ ಇರುವ, ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳು ಇಲ್ಲದ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ. ಲಕೋಟೆ ಮೇಲ್ಬಾಗದಲ್ಲಿ “ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಅರ್ಜಿ” ಎಂದು ನಮೂದಿಸಬೇಕು. ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪ್ರೊ|| ಎಸ್.ಬಿ. ರಂಗನಾಥ್, ಆಡಳಿತಾಧಿಕಾರಿ ಡಾ. ಹೆಚ್.ವಿ. ವಾಮದೇವಪ್ಪ ಕೋರಿದ್ದಾರೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ.) ಸಿರಿಗೆರೆ ಚಿತ್ರದುರ್ಗ ಜಿಲ್ಲೆ ದೂ: 08194-268829, ಇ-ಮೇಲ್ : ao.taralabalu@gmail.com
No. C6-110/S-1889/2023 Download Application From: www.taralabalu.in 25.3.2023.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top