Connect with us

Dvgsuddi Kannada | online news portal | Kannada news online

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ತರಳಬಾಳು ಶ್ರೀ

ಪ್ರಮುಖ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ತರಳಬಾಳು ಶ್ರೀ

ಬೆಂಗಳೂರು: ಶ್ರೀ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿಂದು ಭೇಟಿಯಾಗಿ ಆರೋಗ್ಯ ವಿಚಾರಿಸಿ ಆಶೀರ್ವಾದಿಸಿದರು.ಬೆಂಗಳೂರಿನ ಪದ್ಮನಾಭನಗರದಲ್ಲಿ ಭೇಟಿ ನೀಡಿದ್ದರು. ಗೌಡರ ಕುಟುಂಬವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸಿದರು.

ಇಳಿ ವಯಸ್ಸಿನಲ್ಲೂ ಹೆಚ್.ಡಿ.ದೇವೇಗೌಡರು ಶ್ರೀ ಜಗದ್ಗುರುಗಳವರ ಪಾದಕ್ಕೆ ಪ್ರಣಾಮಗಳನ್ನು ಸಲ್ಲಿಸಿ ಸ್ವಾಗತಿಸಿದರು. ಶ್ರೀ ಜಗದ್ಗುರುಗಳವರು ಮಾಜಿ ಪ್ರಧಾನಿಗಳಿಗೆ ಏಲಕ್ಕಿ ಹಾರ, ಶಾಲು ಹೊದಿಸಿ, ಹಣ್ಣುಗಳ ಬುಟ್ಟಿಯನ್ನು ನೀಡಿ ಆರೋಗ್ಯ ಪೂರ್ಣರಾಗಿ ಕರುನಾಡಿನ ಧ್ಯೇಯಕ್ಕೆ ಮತ್ತೊಷ್ಟು ಕ್ರೀಯಾಶೀಲರಗಿ ಯುವ ನೇತಾರರಿಗೆ ರಾಜಕೀಯ ಮಾರ್ಗದರ್ಶನ ಆಶೀರ್ವಾದಿಸಿದರು.

ವಯೋಸಹಜತೆಯಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು. ವಿಶ್ರಾಂತಿಯಲ್ಲಿರುವುದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದಾಗಿ ಗೌಡರು ತಿಳಿಸಿದರು. ಶ್ರೀ ಜಗದ್ಗುರುಗಳವರ ಬಿಸಿಲು ಬೆಳದಿಂಗಳು ಅಂಕಣ ಪ್ರಕಟಣೆಯ ದಿನವಾದ ಇಂದಿನ ಲೇಖನ ವಾದ ‘ಮರೆತು ಹೋದ ಕನ್ನಡ ನಾಡಿನ ಜಲಿಯನ್ ವಾಲಾ ಬಾಗ್’ ಕುರಿತಾಗಿ ಮಾಜಿ ಪ್ರಧಾನಿ ಚರ್ಚಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಜನಿಸಿರುವ ಗೌಡರು 1953ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆರಂಭವಾದ ತಮ್ಮ ರಾಜಕೀಯ ಹೋರಾಟವನ್ನು ಹಂಚಿಕೊಂಡರು.

1970-80 ರ ದಶಕದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸಾಸಲು ಮತ್ತು ಸಿರಿಗೆರೆಯ ಮಠದಲ್ಲಿ ಹಲವಾರು ಬಾರಿ ಭೇಟಿ ಮಾಡಿ ರಾಜಕೀಯ ಮಾರ್ಗದರ್ಶನ ನೀಡುವಂತೆ ಪ್ರಾರ್ಥಿಸಿದ್ದಾಗಿ, ಶ್ರೀಗಳ ಸಾಮಾಜಿಕ ಕಳಕಳಿಗೆ ಆಗಿನ ತಲೆಮಾರಿನ ರಾಜಕೀಯ ಧುರೀಣರಲ್ಲಿ ಎದುರಾಡುವ ಸಾಮರ್ಥ್ಯ ಇರಲಿಲ್ಲ, ಇದಕ್ಕೆ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಘಟನೆಯೇ ಸಾಕ್ಷಿಯಾಗಿದೆ. ತರಳಬಾಳು ಹುಣ್ಣಿಮೆ ಮಹೋತ್ಸವವು ಭಾವೈಕ್ಯತೆಯ ಸಂಗಮವಾಗಿ ಈ ನಾಡಿಗೆ ಮಾದರಿಯಾದ ಸಮಾರಂಭ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮಾದರಿ ಸಮಾಜ ಸೇವಾಕಾರ್ಯಾಗಳನ್ನು ಸ್ಮರಿಸಿದ ಹೆಚ್.ಡಿ.ದೇವೇಗೌಡರವರು ತಮ್ಮ ನೇತೃತ್ವದಲ್ಲಿ ಜಾರಿಯಾದ 20 ಕ್ಕೂ ಅಧಿಕ ಏತನೀರಾವರಿ ಯೋಜನೆಗಳ ಮೂಲಕ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸಿ, ವಿಶೇಷವಾಗಿ ಜಗಳೂರು ಮತ್ತು ಭರಮಸಾಗರ ಯೋಜನೆಗಳ ಮೂಲಕ ಲಕ್ಷಾಂತರ ರೈತರಿಗೆ ಸಂಜೀವಿನಿಯಾಗಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೆಲವು ದಿನಗಳವರೆಗೆ ವಿರಾಮ ನೀಡಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದ ಶ್ರೀ ಜಗದ್ಗುರುಗಳವರು, “ನಿಮ್ಮ ಈ ಹೋರಾಟದ ಕಿಚ್ಚು ದೇಶದ ಯುವ ಪೀಳಿಗೆಗೆ ಸ್ಪೂರ್ತಿಯಾಗುವ ಆಶಯ ನಮ್ಮದಾಗಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ನಿಮ್ಮ ಜೀವನ ಹೋರಾಟ ಪ್ರಧಾನಿಯಾಗುವವರೆಗೆ ಕರೆದೊಯ್ದುದ್ದು, ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸಿ,ಸಾಮಾಜಿಕ-ಆರ್ಥಿಕ ಅಭಿವೃದ್ಧಿಯೊಕದಿಗೆ ಆದರ್ಶ ರಾಜ್ಯವೊಂದರ ನಿಮ್ಮ ಕನಸು, ತಮ್ಮ ಸ್ವಾತಂತ್ರ್ಯ ಮತ್ತು ಸಮಾನತೆಯ ಆಶಯಗಳು, ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ . ರಾಜಕೀಯ ಜೀವನ, ಕುಟುಂಬದ ಸಹಕಾರವನ್ನು ಕುರಿತು ಸಿಂಹಾವಲೋಕನಗೈಯುವ ಆತ್ಮಕಥೆಯನ್ನು ರಚಿಸಲು ಈ ವಿಶ್ರಾಂತಿ ಸಮಯವನ್ನು ಬೆಳೆಸಿಕೊಳ್ಳುವಂತೆ ಶ್ರೀ ಜಗದ್ಗುರುಗಳವರು ದೇವೇಗೌಡರಿಗೆ ಒತ್ತಾಯ ಪೂರ್ವಕವಾಗಿ ಸೂಚಿಸಿದರು.ಶ್ರೀ ಜಗದ್ಗುರುಗಳವರ ಸೂಚನೆಯನ್ನು ಪ್ರಸಾದವೆಂದು ಸ್ವೀಕರಿಸಿರುವುದಾಗಿ ಆತ್ಮಚರಿತ್ರೆ ಬರೆಯಲು ಸೂಕ್ತ ವ್ಯಾಖ್ಯಾನಕಾರರನ್ನು ನೀಡುವಂತೆ ಕೋರಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top