Connect with us

Dvgsuddi Kannada | online news portal | Kannada news online

ತರಳಬಾಳು ಮಠದ ಉತ್ತಂಗಿ ಜಮೀನು ಕಬಳಿಸಲು ಯತ್ನ; ನ್ಯಾಯಾಲಯದಲ್ಲಿ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ

ಪ್ರಮುಖ ಸುದ್ದಿ

ತರಳಬಾಳು ಮಠದ ಉತ್ತಂಗಿ ಜಮೀನು ಕಬಳಿಸಲು ಯತ್ನ; ನ್ಯಾಯಾಲಯದಲ್ಲಿ ಸಿದ್ದಯ್ಯ ಸಲ್ಲಿಸಿದ್ದ ಅರ್ಜಿ ವಜಾ

ಸಿರಿಗೆರೆ: ತರಳಬಾಳು ಮಠಕ್ಕೆ ಸೇರಿದ್ದ ಉತ್ತಂಗಿ ಜಮೀನು ಕಬಳಿಸಲು ಮಠ ಮಾಜಿ ಕಾರ್ಯದರ್ಶಿ ಎಸ್. ಸಿದ್ದಯ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ ಎಂದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಉತ್ತಂಗಿ ಗ್ರಾಮದ ರೇವಣ್ಣಗೌಡ ತಂದೆ ಬೆಟ್ಟನಗೌಡ ಹಾಗೂ ಧರ್ಮಪತ್ನಿ ಕೊಟ್ರಮ್ಮಗೆ ಸಂತಾನ ಭಾಗ್ಯವಿರಲಿಲ್ಲ. ಈ ದಂಪತಿಗಳಿಗೆ ಉತ್ತಂಗಿ ಗ್ರಾಮದಲ್ಲಿ ಸುಮಾರು 15 ಎಕರೆ ಜಮೀನು ಹಾಗೂ ಎರಡು ವಾಸದ ಮನೆಗಳಿದ್ದವು. ರೇವಣ್ಣಗೌಡರ ಮರಣಾನಂತರ, ಕೊಟ್ರಮ್ಮ 2012ರಲ್ಲಿ 15 ಎಕರೆ ಜಮೀನನ್ನು ನಮ್ಮ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಮಾರಾಟ ಮಾಡಿದ್ದರು. ಅಲ್ಲದೆ ಎರಡು ವಾಸದ ಮನೆಗಳನ್ನು ಮಠಕ್ಕೆ ದಾನವಾಗಿ ಕೊಟ್ಟಿದ್ದರು.

ಈ ಜಮೀನು ಮತ್ತು ಮನೆಗಳನ್ನು ನಮ್ಮ ಮಠದ ಇತಿಹಾಸದಲ್ಲಿ ಪ್ರಸಿದ್ಧವಾದ ಉತ್ತಂಗಿಯಲ್ಲಿ ಈಗಿನ ಜಗದ್ಗುರುಗಳವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಮ್ಮ ಗುರುಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಹೆಸರಿನಲ್ಲಿ ಸ್ಥಾಪಿಸಿರುವ ಶಾಲೆಯ ಉಪಯೋಗಕ್ಕಾಗಿ ದಿ.ಕೊಟ್ರಮ್ಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೊಟ್ಟಿದ್ದರು.

ಕೊಟ್ರಮ್ಮಳ ಮರಣಾನಂತರ, ಈಕೆಯ ತಂಗಿ ಮಕ್ಕಳು ಹೂವಿನಹಡಗಲಿ ಹಿರಿಯ ಶ್ರೇಣಿ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಕೊಟ್ರಮ್ಮಳಿಗೆ ಸೇರಿದ್ದ 15 ಎಕರೆ ಜಮೀನು ಹಾಗೂ ಎರಡು ಮನೆಗಳು ತಮಗೆ ಸೇರಬೇಕೆಂದು 2019 ರಲ್ಲಿ ದಾವೆ ಹೂಡಿದ್ದರು.

ಆ ಸಮಯದಲ್ಲಿ ಡಾ. ಎಸ್ ಸಿದ್ದಯ್ಯನು ಮಠದ ಕಾರ್ಯದರ್ಶಿಯಾಗಿದ್ದನು. ಇತ್ತೀಚೆಗೆ ಮಠದ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಿದ ಮೇಲೆ ದಿವಂಗತೆ ಕೊಟ್ರಮ್ಮಳಿಂದ ಈ 15 ಎಕರೆ ಜಮೀನನ್ನು ತಾನು ಖರೀದಿಸಿದ್ದೆನೆಂದೂ ಮತ್ತು ಎರಡು ಮನೆಗಳನ್ನು ದಾನವಾಗಿ ಪಡೆದಿದ್ದೆನೆಂದೂ, ಇದಾವುದೂ ಮಠಕ್ಕೆ ಸೇರಿದ ಆಸ್ತಿಗಳಲ್ಲ ತನಗೆ ಸೇರಿದ್ದೆಂದು ಡಾ. ಸಿದ್ದಯ್ಯನು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದನು.ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ ಡಾ. ಸಿದ್ದಯ್ಯನು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನಿನ್ನೆ ದಿನಾಂಕ 31-8-2024 ರಂದು ವಜಾಗೊಳಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top