ಬೆಂಗಳೂರು: ಬರೋಬ್ಬರಿ ಒಂದು ವರ್ಷದ ಬಳಿಕ ಪೂರ್ಣ ಪ್ರಮಾಣದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಫೆ.22 ರಿಂದ 06ರಿಂದ 8ನೇ ತರಗತಿಗಳು ಆರಂಭವಾಗಲಿದೆ ಎಂದಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.22ರಿಂದ 1-5ನೇ ತರಗತಿವರೆಗೆ ವಿದ್ಯಾಗಮ ಶಾಲೆಗಳು ಸಹ ಆರಂಭವಾಗಲಿದೆ. ವಿದ್ಯಾಗಮ ನೋಡಿಕೊಂಡು ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಕ್ಕೆ ಒಪ್ಪಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಇನ್ನು ಫೆ.22ರಿಂದ 6-8ನೇ ತರಗತಿವರೆಗೆ ಬೌತಿಕ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುತ್ತಿದೆ. ಈ ಮೂಲಕ ವರ್ಷದ ಬಳಿಕ ರಾಜ್ಯದಲ್ಲಿ ಮತ್ತೆ ಶಾಲೆಗಳು ಪುನರಾರಂಭವಾಗುತ್ತಿದೆ.



