ಡಿವಿಜಿ ಸುದ್ದಿ, ಬೆಂಗಳೂರು: ಆರ್.ಆರ್ ನಗರ ಕ್ಚೇತ್ರದ ಉಪಚುನಾವಣೆ ಕಣ ರಂಗೇರುತ್ತಿದೆ. ನಾಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಧುಮುಕಲಿದ್ದಾರೆ. ಈ ಮೂಲಕ ಆರ್ ಆರ್ ನಗರದಲ್ಲಿ ಸಾರಥಿ ಭರ್ಜರಿ ಪ್ರಚಾರ ನಡೆಯಲಿದೆ.
ಸ್ಯಾಂಡಲ್ ವುಡ್ ನ ಚಾಲೆಜಿಂಗ್ ಸ್ಟಾರ್ ದರ್ಶನ್, ಕನ್ನಡದ ಸೂಪರ್ ಸ್ಟಾರ್ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್, ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ್ದರು. ಅಂದಿನ ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸಿನಿಮಾ ಸ್ಟೈಲ್‍ನಲ್ಲೇ ಟಾಂಗ್ ಕೊಟ್ಟಿದ್ದರು.
ದರ್ಶನ್ ಜೊತೆ ರಾಕಿಂಗ್ ಸ್ಟಾರ್ ಯಶ್ ಮತಬೇಟೆ ನಡೆಸಿದ್ದರು.ಈಗ ರಾಜ್ಯದಲ್ಲಿ ಬೈ ಎಲೆಕ್ಷನ್ ಬಂದಿದೆ. ಅದ್ರಲ್ಲೂ ದರ್ಶನ್ ಹಾಕಿಕೊಂಡು ಬಹುಕೋಟಿ ಸಿನಿಮಾ ಕುರುಕ್ಷೇತ್ರ ನಿರ್ಮಿಸಿದ್ದ ಮುನಿರತ್ನ ಚುನಾವಣೆಗೆ ನಿಂತಿದ್ದಾರೆ. ದರ್ಶನ್ ಮನೆ ಸಹ ಆರ್.ಆರ್ ನಗರದಲ್ಲೇ ಇದೆ. ಮುನಿರತ್ನ ಕೂಡ ದರ್ಶನ್ ಆಪ್ತರಲ್ಲಿ ಒಬ್ಬರಾಗಿದ್ದು ಚುನಾವಣಾ ಪ್ರಚಾರಕ್ಕೆ ದರ್ಶನ್ ಬರ್ತಾರೆ ಎಂದಿದ್ದಾರೆ.
ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿಯರಾದ ಖುಷ್ಬೂ, ತಾರಾ ಕ್ಯಾಂಪೇನ್ ಮಾಡಿದ್ದಾರೆ. ದರ್ಶನ್ ಸಹ ಪ್ರಚಾರಕ್ಕೆ ಇಳಿದಿದ್ದಾರೆ.