ಬೆಂಗಳೂರು: ರಾಜ್ಯ ಸರ್ಕಾರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತು ಆ.5ರಂದು ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರ ರಾಜ್ಯದ 61 ನಗರಸಭೆ, 123 ಪುರಸಭೆ ಸೇರಿದಂತೆ 117 ಪಟ್ಟಣ ಪಂಚಾಯಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವಂತ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ, ಚನ್ನಗಿರಿ,ಹೊನ್ನಾಳಿ, ಮಲೇಬೆನ್ನೂರು ಪುರಸಭೆ ಹಾಗೂ ನ್ಯಾಮತಿ ಪಟ್ಟಣ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯೂ ಪ್ರಕಟಗಿಂಡಿದೆ.
- ಮೀಸಲಾತಿ ವಿವರ
- ಹರಿಹರ ನಗರಸಭೆ – ಅಧ್ಯಕ್ಷ ಎಸ್ ಟಿ (ಮಹಿಳೆ), ಉಪಾಧ್ಯಕ್ಷ ಸಾಮಾನ್ಯ
- ಚನ್ನಗಿರಿ ಪುರಸಭೆ- ಅಧ್ಯಕ್ಷ ಎಸ್ಸಿ (ಮಹಿಳೆ), ಉಪಾಧ್ಯಕ್ಷ -ಸಾಮಾನ್ಯ
- ಹೊನ್ನಾಳಿ ಪುರಸಭೆ – ಅಧ್ಯಕ್ಷ ಎಸ್ಸಿ, ಉಪಾಧ್ಯಕ್ಷ ಸಾಮಾನ್ಯ (ಮಹಿಳೆ)
- ಮಲೇಬೆನ್ನೂರು ಪುರಸಭೆ -ಅಧ್ಯಕ್ಷ ಎಸ್ ಟಿ (ಮಹಿಳೆ), ಉಪಾಧ್ಯಕ್ಷ ಸಾಮಾನ್ಯ (ಮಹಿಳೆ)
- ನ್ಯಾಮತಿ ಪಟ್ಟಣ ಪಂಚಾಯ್ತಿ- ಅಧ್ಯಕ್ಷ ಎಸ್ ಟಿ, ಉಪಾಧ್ಯಕ್ಷ ಹಿಂದುಳಿದ ವರ್ಗ (ಮಹಿಳೆ)