ಬೆಂಗಳೂರು: ಸಿಡಿ ಪ್ರಕಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನನ್ನ ವಿರುದ್ಧ ಇಂತಹ 10 ಕೇಸ್ ದಾಖಲಾದ್ರೂ, ಹೆದರುವುದಿಲ್ಲ. ಎಲ್ಲವನ್ನು ಎದುರಿಸಲು ಸಿದ್ಧನಿದ್ದೇವೆ ಎಂದಿದ್ದಾರೆ.
ನನ್ನ ಮೇಲೆ ಇನ್ನು 10 ಕೇಸ್ ಗಳನ್ನು 10 ವಕೀಲರು ಮೂಲಕ ದಾಖಲಿಸಿದರೂ ನಾನು ಹೆದರುವುದಿಲ್ಲ. ಅದನ್ನು ಜಯಿಸಲು ಸಿದ್ಧವಿದ್ದೇನೆ. ಸರ್ಕಾರವನ್ನೇ ತಗೆದಿದ್ದೇನೆ. ಇದ್ಯಾವ ಲೆಕ್ಕ. ಇದೊಂದು ಷಡ್ಯಂತರ. ನಾನು ಯಾವುದೇ ತಪ್ಪು ಮಾಡಿಲ್ಲ. ಯುವತಿಯ ಕೊನೆ ಅಸ್ತ್ರವಾಗಿ ದೂರು ದಾಖಲಿಸಿದ್ದಾರೆ. ಇನ್ನು ಅವರ ಆಟ ಮುಗಿಯಿತು. ನಾಳೆಯಿಂದ ಆಟ ಶುರುವಾಗುತ್ತದೆ. ಮೊದಲು ನಾನು ಕೊಟ್ಟ ದೂರು ತನಿಖೆ ಆಗಬೇಕು. ಕಿಂಗ್ ಪಿನ್ ಮನೆಯಲ್ಲಿ ಹಣ, ಬಂಗಾರ ಸಿಕ್ಕಿದೆ. ಎಲ್ಲ ತನಿಖೆ ಆಗಬೇಕು.
ನಾನು ಮುಖ್ಯಮಂತ್ರಿ , ಗೃಹ ಸಚಿವರನ್ನು ಮಾಹಿತಿ ನೀಡಿದ್ದೇನೆ. ಇದೊಂದು ಷಡ್ಯಂತರ. ಇದರ ಹಿಂದೆ ಯಾರು ಇದ್ದಾರೆ ಯಾರು ಇದ್ದಾರೆ, ಯಾವ ಮಹಾನ್ ನಾಯಕ ಇದ್ದಾರೆ ಎಂಬುದು ಶೀಘ್ರದಲ್ಲಿಯೇ ಗೊತ್ತಾಗಲಿದೆ ಎಂದರು.



