ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಅ. 27ರವರೆಗೆ ಭಾರೀ ಮಳೆಯಾಗಲಿದ್ದು,ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಎಚ್ಚರಿಕೆ ನೀಡಿದೆ.
ಒಂದೆಡೆ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ತತ್ತರಿಸಿ ಹೋಗಿದ್ದಾರೆ. ಇದೀಗ ಬೆಂಗಳೂರಲ್ಲಿ ಮಳೆಯ ಅಬ್ಬರಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ.. ಮುಂಬೈ, ಹೈದರಾಬಾದ್ ರೀತಿ ಬೆಂಗಳೂರು ಸತತವಾಗಿ ಮಳೆ ಸುರಿಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಅಕ್ಟೋಬರ್ ತಿಂಗಳ ಈ ಮಳೆ ಕಂಟಕ ಇನ್ನೆಷ್ಟು ದಿನ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ಇನ್ನು ಎರಡು ದಿನ ಭಾರೀ ಮಳೆ ಎಂದು ಹವಮಾನ ಇಲಾಖೆ ಮಾಹಿತಿ ಇನ್ನಷಗ್ಟು ಭಯ ಹುಟ್ಟಿಸಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೆರೆಡು ದಿನ ಯಲ್ಲೋ ಆಲರ್ಟ್ ಘೋಷಿಸಲಾಗಿದೆ.
ನಿನ್ನೆ ಸಂಜೆ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಹೊಸಕರೆಹಳ್ಳಿ, ಕೊರಮಂಗಲ ಸಂಪೂರ್ಣ ಜಲಾವೃತವಾಗಿದೆ. ಇದೇ ರೀತಿ ಸತತ 2ರಿಂದ 4 ಗಂಟೆ ಮಳೆಯಾದ್ರೆ ಬೆಂಗಳೂರು ಮುಳುಗೋದು ಗ್ಯಾರಂಟಿ ಎನ್ನುವಂತಾಗಿದೆ. ಹೊಸಕೆರೆಹಳ್ಳಿಯಲ್ಲಿ ಇಂದು ಬೆಳಗ್ಗೆಯಿಂದಲೇ ಕ್ಲೀನಿಂಗ್ ನಡೆಯುತ್ತಿದೆ. ಸ್ಥಳಕ್ಕೆ ಸಚಿವ ಆರ್ .ಅಶೋಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೊಸಕೆರೆ ಹಳ್ಳಿಯ ದತ್ತಾತ್ರೇಯ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯ ಹಿಂಭಾಗದಲ್ಲಿರುವ ಕಲ್ಯಾಣ ಮಂಟಪವೂ ಸಂಪೂರ್ಣ ಜಲಾವೃತವಾಗಿದ್ದು, ಕಲ್ಯಾಣ ಮಂಟಪದ ಅಂಡರ್ ಗ್ರೌಂಡ್ ನಲ್ಲಿ ಕಾಲಿಡಲು ಆಗದಂತೆ ಕೆಸರಿನ ಗದ್ದೆಯಂತಾಗಿದೆ.



