ಡಿವಿಜಿ ಸುದ್ದಿ, ಹರಿಹರ: ಸಿಡಿಲು-ಗುಡುಗು ಸಹಿತ ಭಾರೀ ಮಳೆಗೆ 6 ಕುರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಿದರೆ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಿದರೆ ಗ್ರಾಮದ ಗುಡ್ಡದಲ್ಲಿ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು 6 ಕುರಿಗಳು ಸಾವನ್ನಪ್ಪಿವೆ. 3 ಕುರಿಗಳು ತೀವ್ರವಾಗಿ ಅಸ್ವಸ್ಥಗೊಂಡಿವೆ. ಘಟನಾ ಸ್ಥಳಕ್ಕೆ ಪಶು ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಅಧಿಕಾರಿ ಆನಂದ ಮಾತನಾಡಿ ಚಿಕ್ಕಬಿದರೆ ಗ್ರಾಮದ ಜೋಗಳಿ ಸಣ್ಣ ಸಿದ್ದಪ್ಪ ತಂದೆ ರಾಮಪ್ಪ ಇವರ ಸಂಬಂಧಿಸಿದ ಕುರಿಗಳನ್ನು ಮೇಯಿಸಲು ಗುಡ್ಡದ ಕಡೆಗೆ ಹೋಗಿದ್ದ ಸಮಯದಲ್ಲಿ ಮಳೆಯ ಪ್ರಾರಂಭ ಮುನ್ಸೂಚನೆ ಗೊತ್ತಾಗುತ್ತಿದ್ದಂತೆ ಕುರಿಗಳ ಹಿಂಡನ್ನು ಮನೆ ಕಡೆಗೆ ತಲುಪಿಸುವುದಕ್ಕೆ ಮುಂದಾದರು ಅದೇ ವೇಳೆ ಗುಡುಗು-ಸಿಡಿಲು ಜೋರಾಗಿದ್ದರಿಂದ ಹಿಂದೆ ಉಳಿದುಕೊಂಡ ಒಂಬತ್ತು ಕುರಿಗಳಲ್ಲಿ 6 ಕುರಿಗಳಿಗೆ ಸಿಡಿಲು ಬಡೆದು ಸ್ಥಳದಲ್ಲೇ ಮೃತಪಟ್ಟರೆ, ಇನ್ನುಳಿದ ಮೂರು ಕುರಿಗಳು ಅಸ್ವಸ್ಥ ವಾಗಿವೆ ಎಂದಿದರು.
ಕಳೆದ ಎರಡು ದಿನಗಳಿಂದ ಮಳೆಯ ಅರ್ಭಟಕ್ಕೆ ಹರಿಹರ ನಗರದಲ್ಲಿ 2 ಮನೆ ಹನಿ ಆಗಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಅನಾಹುತದ ಪ್ರದೇಶಗಳಿಗೆ ಕಂದಾಯ ಇಲಾಖೆ ತಂಡ ಭೇಟಿ ನೀಡಿ ವರದಿಯನ್ನು ತಾಸಿಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.