ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಇಂದು ದಾವಣಗೆರೆ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆಯಾಗಿದೆ.
ಭಾರೀ ಪ್ರಮಾಣದಲ್ಲಿ ಗುಡುಗು, ಸಿಡಿಲಿದ್ದು, ನರಲ್ಲಿ ಆತಂಕ ಹುಟ್ಟಿಸಿದೆ.. ನಿನ್ನೆ ಕೂಡ ಜಿಲ್ಲೆಯಲ್ಲಿ ಸಿಡಿಲಿಗೆ ದಾವಣಗೆರೆ ತಾಲ್ಲೂಕಿನಲ್ಲಿ ಇಬ್ಬರು ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ ಒಬ್ಬರು ಬಲಿಯಾಗಿದ್ದರು. ದಾವಣಗೆರೆ, ಶಾಮನೂರು, ಬೇತೂರು, ಆವರಗೆರೆ, ಕಡ್ಲೆಬಾಳು, ಕೊಂಡಜ್ಜಿ, ಆವರಗೊಳ್ಳ ಸೇರಿದಂತೆ ಅನೇಕ ಕಡೆ ಭಾರೀ ಮಳೆಯಾಗಿದೆ.



