ಚಿಕ್ಕಮಗಳೂರು : ಅಕಾಲಿಕ ಮಳೆಯಿಂದ ಉಂಟಾಗಿರುವ ಬೆಳೆ ಹಾನಿ ಪರಿಹಾರ ನೀಡಲು ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರವಾಗಿ ಹಣ ಬಿಡುಗಡೆ ಮಾಡಬೇಕು. ಚುನಾವಣೆ ಆಯೋಗ ಅನುಮತಿ ನೀಡಿದ್ರೆ ಸಿಕ್ಕರೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.ಎಲ್ಲೆಲ್ಲಿ ನೆರೆ, ಬೆಳೆಹಾನಿಯಾದ ರೈತರಿಗೆ ಶೇ. ನೂರಷ್ಟು ಪರಿಹಾರ ಕೊಡುತ್ತೇವೆ ಎಂದರು.
ಬೆಳೆ ಹಾನಿ ಸಮೀಕ್ಷೆಗೆ ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ನೀವು ಮಾತ್ರ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಬೆಳಗಾವಿಯಲ್ಲಿ 76 ಸಾವಿರ ರೈತರ ಬೆಳೆ ಹಾನಿ, ಬಾಗಲಕೋಟೆಯಲ್ಲಿ 20 ಸಾವಿರ ರೈತರ ಬೆಳೆ ಹಾನಿಯಾಗಿದೆ.



