Connect with us

Dvgsuddi Kannada | online news portal | Kannada news online

ದ್ವಿತೀಯ ಪಿಯುಸಿ ಪರೀಕ್ಷೆ‌ ಅಂತಿಮ ವೇಳಾಪಟ್ಟಿ ಪ್ರಕಟ; ಏಪ್ರಿಲ್ 22ರಿಂದ ಮೇ 18ರವರೆಗೆ ಪರೀಕ್ಷೆ

ಪ್ರಮುಖ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷೆ‌ ಅಂತಿಮ ವೇಳಾಪಟ್ಟಿ ಪ್ರಕಟ; ಏಪ್ರಿಲ್ 22ರಿಂದ ಮೇ 18ರವರೆಗೆ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಪರಿಷ್ಕೃತ ಹಾಗೂ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, ಏಪ್ರಿಲ್ 22ರಿಂದ ಮೇ 18ರವರೆಗೆ ವ ಪರೀಕ್ಷೆಗಳು ನಡೆಯಲಿವೆ.

ಈ ಹಿಂದೆ ಪಿಯು ಬೋರ್ಡ್​ ಏಪ್ರಿಲ್ 16ರಿಂದ 21ರವರೆಗೆ ಪರೀಕೆ ನಡೆಸಲು ವೇಳಾಪಟ್ಟಿ ಬಿಡುಗಡೆ ಆಗಿತ್ತು. ಆದರೆ, ಜೆಇಇ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ದಿನಾಂಕಗಳು ಒಟ್ಟಿಗೆ ಬರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಿಸಿದೆ.

ವಿದ್ಯಾರ್ಥಿಗಳು/ಪೋಷಕರುಗಳಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್ 5ರ ಸಂಜೆ 5:00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ವೇಳಾಪಟ್ಟಿಯ ದಿನದಂದು ಸಿಎಲ್ಎಟಿ ಪರೀಕ್ಷೆ, ಎಐಎಂಎ ಯುಜಿಎಟಿ ಪರೀಕ್ಷೆ ಹಾಗೂ ನವೋದಯ ವಿದ್ಯಾಲಯ ಪರೀಕ್ಷೆ ಇರುವುದಾಗಿ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಹೀಗಾಗಿ ಇದನ್ನ‌ ಪರಿಗಣಿಸಿ ಅಂತಿಮ‌ ವೇಳಾಪಟ್ಟಿಯನ್ನು ಪರಿಷ್ಕರಿಸಿ ಬಿಡುಗಡೆ ಮಾಡಲಾಗಿದೆ. ಅದರಂತೆ ಏಪ್ರಿಲ್ 22ರಿಂದ ಮೇ 18ರವರೆಗೆ ಪರೀಕ್ಷೆ ನಡೆಯಲಿದೆ.

  • ಪರೀಕ್ಷೆ ವೇಳಾಪಟ್ಟಿ
  • 22-4-2022 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
  • 23-4-2022 – ಗಣಿತ, ಶಿಕ್ಷಣ ಶಾಸ್ತ್ರ
  • 25-4-2022 – ಅರ್ಥಶಾಸ್ತ್ರ
  • 26-4-2022 – ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
  • 27-4-2022 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • 28-4-2022 – ಅರೇಬಿಕ್, ಕನ್ನಡ
  • 2-5-2022 – ಭೂಗೋಳ ಶಾಸ್ತ್ರ, ಜೀವಶಾಸ್ತ್ರ
  • 4-5-2022 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್​ನೆಸ್
  • 5-5-2022 – ಇಂಗ್ಲಿಷ್
  • 10- 5-2022 – ಇತಿಹಾಸ, ಭೌತಶಾಸ್ತ್ರ
  • 12-5-2022 – ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • 14-5-2022 – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
  • 17 -5-2022 – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಐಚ್ಛಿಕ ಕನ್ನಡ
  • 18-5-2022 – ಹಿಂದಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top