ಡಿವಿಜಿ ಸುದ್ದಿ, ಬೆಂಗಳೂರು: ಯೋಗೀಶಗೌಡ ಗೌಡರ ಹತ್ಯೆ ಪ್ರಕರಣಕ್ಕೂ ನಮ್ಮ ನಾಯಕ ವಿನಾಯ್ ಕುಲಕರ್ಣಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ರಾಜಕೀಯ ಪ್ರೇರಿತ ವಿಚಾರಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ನಾನು ಗಮನಿಸಿದ್ದಾನೆ. ವಿನಾಯ್ ಕುಲಕರ್ಣಿ ಜೊತೆ ಮಾತನಾಡಿದ್ದೇನೆ. ರಾಜ್ಯ ಪೊಲೀಸರು ಈಗಾಗಲೇ ರಿಪೋರ್ಟ್ ಕೊಟ್ಟಿದ್ದಾರೆ. ಆದರೆ, ಆಭಾಗದ ಬಿಜೆಪಿ ನಾಯಕರು ರಾಜಕೀಯ ಪ್ರಭಾವದಿಂದ ನಮ್ಮ ನಾಯಕರನ್ನು ಮಟ್ಟ ಹಾಕಲು ಮುಂದಾಗಿದ್ದಾರೆ. ಈ ಪ್ರಕರಣಕ್ಕೂ ನಮ್ಮ ನಾಯಕರಿಗೂ ಸಂಬಂಧವಿಲ್ಲ ಎಂದರು.

ನಾನು ಕೂಡ ಸಿಬಿಐ ತನಿಖೆ ಎದರಿಸಿದ್ದೇನೆ. ಸಿಬಿಐ ಅಧಿಕಾರಿಗಳು ಕಾನೂನು ಮೂಲಕ ಹೋಗುತ್ತಾರೆ. ಕಾನೂನು ಬಿಟ್ಟು ವಿಚಾರಣೆ ಮಾಡುವುದಿಲ್ಲ. ಹೀಗಾಗಿ ನಮಗೆ ವಿಶ್ವಾಸವಿದೆ. ದೇಶದ ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ. ನಮ್ಮ ನಾಯಕರ ಪ್ರಭಾವ ಕುಗ್ಗಿಸಲು ಇಂತಹ ರಾಜಕೀಯ ಪ್ರೇರಿತ ದಾಳಿ ನಡೆಯುತ್ತಿವೆ ಎಂದರು.



