ವಿಜಯಪುರ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದೆ ಎಂದು ಆಗ ಏನು ಬೇಕಾಗಿತ್ತೋ ಅದನ್ನು ಹೇಳಿದ್ದೆ. ಅದನ್ನೇ ವರ್ಷಪೂರ್ತಿ ಎಳೆಯುತ್ತಾ ಹೋಗುತ್ತೇನು…? ಎಲ್ಲ ಸರಿ ಮಾಡ್ಕೊಂಡು ಹೋಗ್ತಾರೆ ನಡಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದಿಂದ ಬಿಎಲ್ ಡಿಇ ಸಭಾಂಗಣದಲ್ಲಿ ಡೀಮ್ಡ್ ವಿಶ್ವವಿದ್ಯಾಲಯದ 11ನೇ ಘಾಟಿಕೋತ್ಸವದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಸಮಾಜ ಸೇವೆ ಪರಿಗಣಿಸಿ ನೀಡಿದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಆಯಕಟ್ಟಿನ ಸ್ಥಾನ ಇಲ್ಲ ಎಂದು ಆಗ ಏನು ಬೇಕಾಗಿತ್ತೋ ಹೇಳಿದ್ದೆ. ಅದನ್ನೇ ವರ್ಷಪೂರ್ತಿ ಮುಂದುವರೆಸುವುದೇ, ಸಮಸ್ಯೆ ಆಗಿದ್ದನ್ನು ಸರಿ ಮಾಡಿಕೊಂಡು ಹೋಗುತ್ತಾರೆ. ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಅರ್ಥವಿಲ್ಲ ಎಂದರು.
ಸಚಿವ ಸತೀಶ ಜಾರಕಿಹೋಳಿ ಬಂಡಾಯದ ವಿಷಯ ನನಗೆ ಗೊತ್ತಿಲ್ಲ. ಯಾರೂ ಬಂಡಾಯ ಏಳುವಂಥದ್ದೇನೂ ಇಲ್ಲ. ಹೀಗಾಗಿ ಯಾರೂ ಹೋಗಲ್ಲ, ಏನೂ ಆಗಲ್ಲ. ಎಲ್ಲರೂ ಸರಿಯಾಗಿರುತ್ತಾರೆಂದು. ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಕೆಲ ಶಾಸಕರ ಹೇಳಿರಬಹುದು, ಆದರೆ, ಅದೇನಾಗತ್ತೋ ಮುಂದೆ ಬಂದದ್ದು ನೋಡೋಣ, ಈಗ್ಯಾಕೆ ಎಂದರು.
ದಾವಣಗೆರೆ: ಪಕ್ಷಕ್ಕೆ ಗೌರವ ಕೊಡದ ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿ
ದಾವಣಗೆರೆ: ದಸರಾ, ದೀಪಾವಳಿ ಪ್ರಯುಕ್ತ ಶೇ.20 ರಷ್ಟು ರಿಯಾಯಿತಿ ದರದಲ್ಲಿ ಚರ್ಮ ವಸ್ತುಗಳ ಮಾರಾಟ



