ಬೆಂಗಳೂರು: ಕೊರೊನಾ ಆರ್ಥಿಕ ಬಿಕ್ಕಟಿನ ನಡುವೆಯೇ ರಾಜ್ಯ ಸರ್ಕಾರ ತನ್ನ 32 ಸಚಿವರು ಮತ್ತು 28 ಸಂಸದರಿಗೆ 13.8 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಇನೋವಾ ಕಾರುಗಳನ್ನ ಖರೀದಿಸಲ ಅನುಮತಿ ನೀಡಿದೆ.
ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (ಡಿಪಿಎಆರ್) ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಚಿವರು ಮತ್ತು ಸಂಸದರ ವಾಹನ ಖರೀದಿಗೆ ನೀಡಿರುವ ಭತ್ಯೆಯನ್ನ 23 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ ಆದೇಶ ಹೊರಡಿಸಿದೆ.
ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಸಂಸದರಿಗೆ 33 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಮತ್ತು 17 ಟೊಯೊಟಾ ಇನ್ನೋವಾ ಕ್ರಿಸ್ಟಸ್ (23 ಲಕ್ಷ ಎಕ್ಸ್ ಶೋರೂಂ) ಐಷಾರಾಮಿ ಎಸ್ ಯುವಿ, ಟೊಯೊಟಾ ಫಾರ್ಚೂನರ್ʼನ್ನ ಆಯ್ಕೆ ಮಾಡಿದ್ದರು.



