ಮಸ್ಕಿ: ಬಸನಗೌಡ ಯತ್ನಾಳ್ , ಸಚಿವ ಈಶ್ವರಪ್ಪ ಅವರು ಸಿಎಂ ವಿರುದ್ಧ ಹೇಳಿಕೆ ಹಿಂದೆ ಆರ್‌ಎಸ್‌ಎಸ್ ಮತ್ತು ಸಂತೋಷ ಬೆಂಬಲ ಇದ್ದು, ಸಿಎಂ ಯಡಿಯೂರಪ್ಪ ಕೆಳಗೆ ಇಳಿಸಲು ಆರ್‌ಎಸ್‌ಎಸ್ ಮುಂದಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಸ್ಕಿ ಉಪಚುನಾವಣೆ ಪ್ರಚಾರಕ ವೇಳೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಪತ್ರ, ಬಸನಗೌಡ ಯತ್ನಾಳ್ ನಾಲ್ಕು ತಿಂಗಳಿಂದ ಸಿಎಂ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೂ, ಅವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಸರ್ಕಾರಕ್ಕೆ ಸಮಸ್ಯೆ ನಿಭಾಯಿಸುವ ಶಕ್ತಿಯಿಲ್ಲ. ಮಂತ್ರಿ ಗಳಲ್ಲಿ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸವಿಲ್ಲ ಎಂದರು.
ಜೆಡಿಎಸ್ ಬಿಟ್ಟು ಬಂದಿಲ್ಲ. ಡಿಸಿಎಂ ಸ್ಥಾನದಿಂದ ಮಿಸ್ಟರ್ ದೇವೇಗೌಡ ಕಿತ್ತು ಹಾಕಿದ್ರು. ಆ ಬಳಿಕ ಅಹಿಂದ ಕಟ್ಟಿದ್ದೆ ಕಾಂಗ್ರೆಸ್‌ನವರು ಕರೆದಿದ್ದಕ್ಕೆ ಬಂದು ಸೇರಿದ್ದೇನೆ. ಪ್ರತಾಪಗೌಡನ ರೀತಿ ದುಡ್ಡು ತಗೊಂದು ಕಾಂಗ್ರೆಸ್‌ಗೆ ಬಂದಿಲ್ಲ ಎಂದು ರೇಣುಕಾಚಾರ್ಯ ಟಾಂಗ್ ನೀಡಿದರು. ವರುಣದಲ್ಲಿ ಯಾರಾದರೂ ಸ್ಪರ್ಧಿಸಲಿ, ಸ್ವಾಗತಿಸುತ್ತೇನೆ ಎಂದರು.