ಡಿವಿಜಿ ಸುದ್ದಿ, ಬೆಂಗಳೂರು: ಶಿರಾ, ಆರ್ ಆರ್ ನಗರ ಫಲಿತಾಂಶ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಜನಾದೇಶಕ್ಕೆ ತಲೆ ಬಾಗಲೇಬೇಕು ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಉಪ ಚುನಾವಣೆ ನಡೆದ ಆರ್.ಆರ್. ನಗರ ಮತ್ತು ಶಿರಾ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿನ್ನಡೆಯಲ್ಲಿದೆ. ಮತ ಎಣಿಕೆ ಮುಗಿಯಲು ಇನ್ನೂ ಒಂದು ಗಂಟೆ ಇದೆ. ಫಲಿತಾಂಶದಲ್ಲಿ ಏನು ಬೇಕಾದರೂ ಆಗುವುದು. ನೋಡೋಣ ಎಂದರು



