ದಾವಣಗೆರೆ: ಕಳೆದ ಲೋಕಸಭಾ ಚುನಾವಣೆ ಮುಗಿದ ಬಳಿಕ ಶುರುವಾದ ಜಿಲ್ಲಾ ಬಿಜೆಪಿ ಬಣ ಬಡಿದಾಟ ಇನ್ನೂ ಕೂಡ ತಣ್ಣಗಾಗಿಲ್ಲ. ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತಿದೆಯೋ ಹೊರತು, ಒಂದಾಗುವ ಲಕ್ಷಣ ಕಾಣುತ್ತಿಲ್ಲ. ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಕೋರ್ ಕಮಿಟಿ ಸಭೆಯಲ್ಲಿಯೂ ಈ ವಿಚಾರ ಮತ್ತೆ ಪ್ರತಿಧ್ವನಿಸಿದೆ.
ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕೋರ್‌ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂ ಗೌಡ ವೀಕ್ಷಕರಾಗಿ ಆಗಮಿಸಿದ್ದರು. ಆದರೆ, ಸಭೆಗೆ ಮಾಜಿ ಸಚಿವ ರೇಣುಕಾಚಾರ್ಯ ಟೀಂ ಹಾಜರಿದ್ದು, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಟೀಂ ಗೈರು ಆಗುವ ಮೂಲಕ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಬಣ ಬಡಿದಾಟ ನಿಲ್ಲಿಸುವಂತೆ ದೆಹಲಿ ನಾಯಕರು ಸಂದೇಶ ಕೊಟ್ಟಿದ್ದು, ಇದಕ್ಕೆ ಬ್ರೇಕ್ ಹಾಕಲು ಕೋರ್‌ಕಮಿಟಿ ಸಭೆಕರೆಯಲು ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ ದಾಸ್ ಅಗರವಾಲ್
ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ದಾವಣಗೆರೆಯಲ್ಲಿ ಕೋರ್‌ಕಮಿಟಿ ಸಭೆ ಕರೆಯಲಾಗಿತ್ತು.
ಸಭೆಗೆ ಹಾಜರಾದವರು
- ಮಾಜಿ ಸಚಿವ ರೇಣುಕಾಚಾರ್ಯ
- ಮಾಜಿ ಸವಿವ ರವೀಂದ್ರನಾಥರ
- ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ,
- ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ
- ಮಾಜಿ ಶಾಸಕ ಎಂ.ಬಸವರಾಜ ನಾಯ್ಕ
- ಮುಂಡರಾದ ಲೋಕಿಕೆರೆ ನಾಗರಾಜ, ಬಿ.ಜಿ. ಅಜಯಕುಮಾರ್
ಸಭೆಗೆ ಗೈರಾದವರು
- ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ,
- ಹರಿಹರ ಶಾಸಕ ಬಿ.ಪಿ. ಹರೀಶರ
- ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್.ಎಸ್.
ಶಿವಕುಮಾರ, - ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್
ಈ ಸಭೆಗೆ ಮಾಜಿ ಸಚಿವರಾದ ರೇಣುಕಾಚಾರ್ಯ-ರವೀಂದ್ರನಾಥರ ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಬಿ.ಜಿ. ಅಜಯಕುಮಾರ ಸೇರಿದಂತೆ ಇಡೀ ಟೀಂ ಸಭೆಗೆ
ಹಾಜರಾಗಿತ್ತು.ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರಶಾಸಕ ಬಿ.ಪಿ. ಹರೀಶರ ಗುಂಪಿನ ಚನ್ನಗಿರಿ ತುಮ್ಮೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ, ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್
ಇತರರು ಗೈರಾಗಿದ್ದರು.
ಇತ್ತೀಚೆಗೆ ಬೆಂಗಳೂರಲ್ಲಿ ರಾಜ್ಯ ಉಸ್ತುವಾರಿ ಅಗರವಾಲ್ ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ, ಮಾಜಿ ಸಚಿವ ರೇಣುಕಾಚಾರ್ಯ ಗುಂಪುಗಳ ಪ್ರತ್ಯೇಕವಾಗಿ ತಲಾ ಒಂದೂವರೆ ಗಂಟೆ ಸಭೆ ಮಾಡಿ ಚರ್ಚಿಸಿತ್ತು. ಆಸಭೆಯಲ್ಲಿಯೂ ಜಿ.ಎಂ. ಸಿದ್ದೇಶ್ವರ, ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ಸಿನ ಜೊತೆಗೆ ಎದುರಾಳಿ ಬಣದವರು ಹೇಗೆಲ್ಲಾ ಹೊಂದಾಣಿಕೆ ರೇಣುಕಾ
ಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ, ಅಲ್ಲಿಯವರೆಗೆ ಯಾವುದೇ ಸಭೆಗೂ ಬರುವುದಿಲ್ಲವೆಂದು ಸಿದ್ದೇಶ್ವರ ಪಟ್ಟುಹಿಡಿದಿದ್ದರು.
ಸಭೆ ನಂತರಸುದ್ದಿಗಾರರೊಂದಿಗೆ ಮಾತನಾಡಿದ ಜ್ಞಾನೇಂದ್ರ , ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಕಾರಣಾಂತರದಿಂದ ಜಿ.ಎಂ. ಸಿದ್ದೇಶ್ವರ, ಬಿ.ಪಿ.ಹರೀಶ ಸಭೆಗೆ ಬಂದಿಲ್ಲ ಎಂದರು.



