ಡಿವಿಜಿ ಸುದ್ದಿ, ಕೊಪ್ಪಳ: ಯೋಗ ಯೋಗ್ಯತೆ ಇದ್ದವರು ಯಾರು ಬೇಕಾದರು ಸಿಎಂ ಆಗಬಹುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳರಷ್ಟು ಬುದ್ಧಿವಂತ ನಾನಲ್ಲ, ನಾನು ಪಕ್ಷದ, ಜನರ ನೆಲೆಯಲ್ಲಿ ಕೆಲಸ ಮಾಡುವವನು. ಸಮಗ್ರ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಮುಖ್ಯಮಂತ್ರಿಗಳು ಯತ್ನಾಳ್ ಜೊತೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಂದು ಸ್ಥಾನ ಗೆದ್ದಿದೆ. ಒಂದು ಬಂದಿದ್ದಕ್ಕೆ ಸಭೆ ಸೇರಿ ಕಾಂಗ್ರೆಸ್ ಜೊತೆ ಸೇರಿ ಹಾಳಾದ್ವಿ, ಜೆಡಿಎಸ್ ಜೊತೆ ಸೇರಿ ಹಾಳಾದ್ವಿ ಎಂದು ಹೇಳಿದವರು ಯಾರು? ಯಾರು ಮೀರ್ ಸಾಧಿಕ್ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು.
ಉತ್ತರ ಕರ್ನಾಟಕದಲ್ಲಾದ ಅನೀರಿಕ್ಷಿತ ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಮುಖ್ಯಮಂತ್ರಿ ಅವರು ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ ಎಂದರು.



