ದಾವಣಗೆರೆ: ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ 2022-23 ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್/ಡಿಎಆರ್) (ಪುರುಷ ಮತ್ತು ತೃತೀಯಲಿಂಗ ಪುರುಷ) ಮಿಕ್ಕುಳಿದ ವೃಂದ-3064 ಹುದ್ದೆಗಳ ನೇಮಕಾತಿ ಸಂಬಂಧ ದಾವಣಗೆರೆ ಜಿಲ್ಲೆಗೆ ಹಂಚಿಕೆ ಮಾಡಿರುವ ಒಟ್ಟು 200 ಅರ್ಹ ಅಭ್ಯರ್ಥಿಗಳಿಗೆ Physical Standard Test and Physical Endurance Test ಪರೀಕ್ಷೆ ಮುಂದೂಡಲಾಗಿದೆ.
ನಾಳೆ (ಜು.19) ಬೆಳಗ್ಗೆ 07-00 ಗಂಟೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಅದರನ್ವಯ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ತುಂಬಿದ್ದು, ರನ್ನಿಂಗ್ ಟ್ರ್ಯಾವಕ್ ಮೇಲೆ ಮಳೆ ನೀರು ನಿಂತಿರುವುದರಿಂದ ಹಾಗೂ ರಾತ್ರಿ ಮಳೆ ಸಂಭವ ಇರುವುದರಿಂದ ಜು.19ರಂದು ನಿಗಧಿಪಡಿಸಿರುವ Physical Standard Test and Physical Endurance Test (ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ) ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಮುಂದಿನ ದಿನಗಳಲ್ಲಿ ಪರೀಕ್ಷೆಯನ್ನು ನಡೆಸುವ ಬಗ್ಗೆ ದಿನಾಂಕವನ್ನು ನಿಗಧಿಪಡಿಸಿ ಮಾಹಿತಿಯನ್ನು ನೀಡಲಾಗುವುದು ಎಂದು ಈ ಮೂಲಕ ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಹಾಜರಾಗಲಿದ್ದ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಅಭ್ಯರ್ಥಿಗಳು ಸಹಕರಿಸಲು ಕೋರಿದೆ.



