ದಾವಣಗೆರೆ :ಸಿಎಂ ಯಡಿಯೂರಪ್ಪ ಅವರು ಪಂಚಮಸಾಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡದಿದ್ದರೆ, ಇತಿಹಾಸದಲ್ಲಿ ಅಳಿದು ಹೋಗುತ್ತೀರಿ ಎಂದು ಕೂಡಲ ಸಂಗಮ ಪೀಠದ ಶ್ರೀ ಜಯಮೃತ್ಯುಂಜ ಸ್ವಾಮೀಜಿ ಹೇಳಿದರು.
ಶ್ರೀಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯತ್ತಿರುವ ಪಾದಯಾತ್ರೆ ಹರಿಹರ ತಲುಪಿದೆ. ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಾಳೆ ಪಾಯಾತ್ರೆ ದಾವಣಗೆರೆ ತಲುಪಲಿದ್ದು, ನಾಳೆಯಿಂದ ಬಾರಕೋಲ ಚಳವಳಿ ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗದಿಂದ ಮಹಿಳೆಯರು ಕುಡುಗೋಲು ಚಳವಳಿ ಹಮ್ಮಿಕೊಂಡಿದ್ದಾರೆ. ಬೆಂಗಳೂರು ಮುಟ್ಟುದರೊಳಗೆ ನಿರ್ಧಾರ ಮಾಡದಿದ್ದರೆ ಬೇರೆಯೇ ಆಗುತ್ತೆ. ನಮ್ಮಲ್ಲಿ ಸಲಕಿ, ಗುದ್ದಲಿ ಇವೆ.ಅವುಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ, ಪಂಚಮಸಾಲಿ ಏನು ಅಂತ ತೋರಿಸುತ್ತೇವೆ ಎಂದು ಸಿಎಂಗೆ ಖಡಕ್ ಎಚ್ಚರಿಕೆ ನೀಡಿದರು.
ನಮ್ಮ ಪಾದಯಾತ್ರೆಗೆ ಸರ್ವಜನಾಂಗ ಬೆಂಬಲ ನೀಡಿದೆ. ಆದ್ರೆ ನಮಗೆ ಮುಖ್ಯಮಂತ್ರಿ ಬೆಂಬಲ ಕೊಟ್ಡಿಲ್ಲ.ಯಾವ ಪಂಚಮಸಾಲಿಯಿಂದ ಇವರು ಮುಖ್ಯಮಂತ್ರಿ ಆಗಿದ್ದಾರೆ.ಆ ಸಮಾಜದ ಗುರುಗಳನ್ನು ಬೀದಿಗಿಳಿಸುವಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ.ಇದು ಅತ್ಯಂತ ನೋವಿನ ಸಂಗತಿ.ನಾನು ಇಲ್ಲಿವರೆಗೂ ಸನ್ಮಾನ್ಯ ಮುಖ್ಯಮಂತ್ರಿ ಎಂದು ಹೇಳಿದ್ದೇನೆ.ಹರಿಹರದಿಂದ ಅದು ಇನ್ನು ಬೇರೆಯೇ ಆಗುತ್ತೆ.ನಾಳೆ ಒಳಗೆ ತೀರ್ಮಾಣ ಮಾಡದೇ ಹೋದರೆ ಕತೆ ಬೇರೆಯಾಗತ್ತೆ. ಪಂಚಮಸಾಲಿಗಳು ಬಾರಕೋಲು ಮತ್ತು ಹೆಣ್ಣಮಕ್ಕಳು ಕುಡುಗೋಲು ಹಿಡಿದುಕೊಂಡು ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಕಳೆದ 12 ವರ್ಷಗಳಿಂದ ಪಂಚಮಸಾಲಿ ಸಮಾಜ ಕಟ್ಟಿದ್ದೇನೆ.ನಾನು ಉಪವಾಸ ಕೂತಿದ್ದಾಗ, ಯಡಿಯೂರಪ್ಪ ನವರು ಭರವಸೆ ಕೊಟ್ಟಿದ್ದರು.ನಾನು ಆ ಸಂದರ್ಭದಲ್ಲಿ ಒಂದು ತಿಂಗಳು ನಾನು ಗಡುವು ನೀಡಿದ್ದೆ, ಇಲ್ಲದಿದ್ದರೆ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದೇ.ಆದ್ರೆ ಅವರು ಮಾಡಲಿಲ್ಲ ಪಾದಯಾತ್ರೆ ಅನಿವಾರ್ಯ ಆಯಿತು. ಸಮಾಜಕ್ಕೆ ಮಂತ್ರಿಸ್ಥಾನ ಕೊಡುತ್ತಿದ್ದೇನೆ ನೀವು ಪಾದಯಾತ್ರೆ ಬಿಡಿ ಎಂದರು.ನನಗೆ ಮಂತ್ರಿಸ್ಥಾನ ಬೇಕಿಲ್ಲ. ನನಗೆ 2 ಎ ಮೀಸಲಾತಿ ಬೇಕು ಎಂದು ಹೇಳಿದೆ. ರಾಜ್ಯದ ಯಾವ ಮುಖ್ಯಮಂತ್ರಿ ಗಳು ಜಾತಿ ಉಪಯೋಗಿಸಿಕೊಂಡಿರಲಿಲ್ಲ.ಆದ್ರೆ ಯಡಿಯೂರಪ್ಪ ನವರು ಸಮಾಜದ ಜೊತೆ ನಾನಿದ್ದೇನೆ ನೀವು ನನ್ನ ಜೊತೆ ಇರಿ ಎಂದು ಹೇಳಿದ್ದರು
ಸುಮ್ಮನಿದ್ದ ಪಂಚಾಮಸಾಲಿ ಸಮಾಜವನ್ನು ಮೀಸಲಾತಿ ಕಾರಣದಿಂದ ಕೆಣಕಿದ್ದಾರೆ .ನನ್ನ ಗುರಿ ಮೀಸಲಾತಿ ಪಡೆಯುವುದು ನನ್ನ ಜೀವನದ ಉದ್ದೇಶ. ಹರಿಹರದ ಗುರು ವಚನಾನಂದ ಶ್ರೀ ನನ್ನನ್ನು ಆಹ್ವಾನಿಸುತ್ತಾರೆ ಎಂದು ಭಾವಿಸಿದ್ದೇ.ಆದ್ರೆ ಇದುವರೆಗೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.