ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಗರದಲ್ಲಿ ರಕ್ತದಾಸೋಹ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ನಗರದ ಸದ್ಯೋಜ್ಯೋತ ಶಿವಾಚಾರ್ಯ ಮಂದಿರದಲ್ಲಿ ರಕ್ತದಾಸೋಹ ಕಾರ್ಯಕ್ರಮ ಆರಂಭಿಸಲಾಯಿತು. ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಮೊದಲು ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಸ್ವಾಮೀಜಿ, ಕಳೆದ 20 ವರ್ಷಗಳಿಂದ ಆಡಳಿತ ಮಾಡಿದ ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟು, ಸನ್ಮಾನಿಸಿ ಗೌರವಿಸಿ ಸಾಕಾಗಿದೆ. ಇದೀಗ ನಮ್ಮದು ಹೋರಾಟದ ಮೂಲಕವೇ 2ಎ ಮೀಸಲಾತಿ ಪಡೆಯಬೇಕಿದೆ ಎಂದರು.
ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸತ್ಯಾಗ್ರಹ ಮಾಡಲಾಯಿತು. ಇದೀಗ ರಕ್ತದಾಸೋಹ ಮೂಲಕ ರಾಜ್ಯದ್ಯಂತ ಹೋರಾಟ ಮಾಡುತ್ತಿದ್ದೇವೆ ನಂತರ ಜನವರಿ 14 ರಿಂದ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಬೇಕು ಇದಕ್ಕೂ ಮಣಿಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನೂ ಹರಿಹರ ಪಂಚಮಸಾಲಿ ಪೀಠ ಹಾಗೂ ಕೂಡಲ ಸಂಗಮ ಪೀಠ ಮೀಸಲಾತಿ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡಲಿವೆ. ಮೀಸಲಾತಿಗಾಗಿ ನಾವು ಬೀದಿಗಳಿದು ಹೋರಾಟ ಮಾಡುತ್ತಿದ್ದೇವೆ ಎಂದರು.



